ಬೆಂಗಳೂರು, ಮಾ.28 (DaijiworldNews/HR): "ಸಿ.ಡಿ ಪ್ರಕರಣದಲ್ಲಿ ಯಾರು ಏನೇ ಹೇಳಿಕೆ ಕೊಟ್ಟರೂ ಪೊಲೀಸರು ಸರಿಯಾದ ರೀತಿಯಲ್ಲಿ ಕ್ರಮಬದ್ದವಾಗಿ ತನಿಖೆ ನಡೆಸಿ ಸತ್ಯಾಂಶ ಕಂಡುಹಿಡಿಯಲಿದ್ದಾರೆ" ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪ್ರಕರಣದ ತನಿಖೆಯನ್ನು ಎಸ್ಐಟಿ ನಡೆಸುತ್ತಿದ್ದು, ತನಿಖೆ ನಡೆಸಲು ಬಿಡಿ. ಯಾರು, ಯಾವುದೇ ರೀತಿಯ ಹೇಳಿಕೆ ಕೊಟ್ಟರೂ ಎಸ್ಐಟಿ ತನಿಖೆ ಮುಂದುವರೆಯಲಿದ್ದು, ಆಡಿಯೋ, ವಿಡಿಯೋ ಸಿ.ಡಿ ಎಲ್ಲವನ್ನೂ ಪರಿಶೀಲನೆ ಮಾಡಲಾಗುತ್ತದೆ. ಅದಕ್ಕೊಂದು ಪದ್ದತಿ, ವ್ಯವಸ್ಥೆಯಿದೆ" ಎಂದರು.
"ಸಿ.ಡಿ ಯುವತಿಗೆ ಈಗಾಗಲೇ ಐದು ನೋಟಿಸ್ ನೀಡಲಾಗಿದ್ದು, ಭದ್ರತೆ ಕೊಡುವ ಭರವಸೆ ನೀಡಿದ್ದೇವೆ. ಇದ್ದಲ್ಲಿಯೇ ಭರವಸೆ ಕೊಡುತ್ತೇವೆ. ಅಲ್ಲದೆ ಆಕೆಯ ಕೋರಿಕೆಯಂತೆ ಅವರ ತಂದೆತಾಯಿಗೂ ಭದ್ರತೆ ಕೊಟ್ಟಿದ್ದೇವೆ" ಎಂದಿದ್ದಾರೆ.
ಇನ್ನು "ಏನೇ ಆದರೂ ಎಸ್ಐಟಿ ಮೇಲೆ ಪ್ರಭಾವ ಬೀರಲು ಆಗುವುದಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೆನಪಿನ ಶಕ್ತಿ ಕಡಿಮೆಯಾಗಿದೆ" ಎಂದು ಹೇಳಿದ್ದಾರೆ.