ಬೆಂಗಳೂರು, ಮಾ.28 (DaijiworldNews/HR): "ನನಗೆ ಯಾವ ಭಯವೂ ಇಲ್ಲ, ಯಾರ ಭದ್ರತೆಯೂ ಬೇಡ ನಾನು ನಾಳೆ ಬೆಳಗಾವಿಗೆ ತೆರಳುತ್ತಿದ್ದೇನೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಯಾರು ಯಾರನ್ನೋ ಕರೆದುಕೊಂಡು ಬಂದು ಹೇಳಿಕೆ ಕೊಡಿಸುತ್ತಿದ್ದು, ಕೇಸು ಮುಚ್ಚಿಹಾಕಲು ಏನೇನೋ ಮಾಡುತ್ತಿದ್ದಾರೆ ಮಾಡಲಿ ಬಿಡಿ. ಆದರೆ ಪೊಲೀಸರು ಸರಿಯಾಗಿ ತನಿಖೆ ಮಾಡಲಿ" ಎಂದರು.
ಇನ್ನು "ಇಂದು ಸಂಜೆ ನಮ್ಮ ನಾಯಕರ ಸಭೆ ಕರೆದಿದ್ದು, ನಾನು, ಸಿಎಲ್ಪಿ ಲೀಡರ್, ರಾಮಲಿಂಗಾರೆಡ್ಡಿ, ಎಸ್.ಆರ್. ಪಾಟೀಲ್ ಬೆಳಗಾವಿಗೆ ತೆರಳಲಿದ್ದು, ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದೇವೆ" ಎಂದಿದ್ದಾರೆ.
ನಾನು ಯಾರ ವಿರುದ್ಧವೂ ನಾನು ಕೇಸ್ ಹಾಕಲ್ಲ. ನನ್ನ ವಿರುದ್ಧವೂ ಪ್ರತಿಭಟನೆ ನಡೆಯಲಿ. ನನಗೇನೂ ಭದ್ರತೆ ಬೇಡ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯುತ್ತೇನೆ ಎಂದು ಹೇಳಿದ್ದಾರೆ.