ಕೋಲ್ಕತ್ತ, ಮಾ.28 (DaijiworldNews/PY): 2009ರಲ್ಲಿ ಪಶ್ಚಿಮಬಂಗಾಳದಲ್ಲಿ ನಡೆದ ಸಿಪಿಎಂ ನಾಯಕರೋರ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ನಾಯಕ ಛತ್ರಧರ್ ಮಹತೊ ಅವರನ್ನು ಎನ್ಐಎ ಬಂಧಿಸಿದೆ.
ಸಾಂದರ್ಭಿಕ ಚಿತ್ರ
"ಮಾರ್ಚ್ 27ರ ಶನಿವಾರದಂದು ಪಶ್ಚಿಮಬಂಗಾಳದಲ್ಲಿ ಮೊದಲ ಹಂತದ ಚುನಾವಣೆ ನಡೆದಿತ್ತು. ಛತ್ರಧರ್ ಮಹತೊ ಅವರು ತಮ್ಮ ಮತಚಲಾಯಿಸಿದ ನಂತರ ಝಾರ್ಗ್ರಾಮ್ ಜಿಲ್ಲೆಯ ಅವರ ನಿವಾಸದಿಂದ ಅವರನ್ನು ಬಂಧಿಸಲಾಗಿದ್ದು, ಅವರನ್ನು ರವಿವಾರ ಇಲ್ಲಿನ ನ್ಯಾಯಾಲಯವೊಂದರ ಮುಂದೆ ಹಾಜರುಪಡಿಸಲಾಗುವುದು" ಎಂದು ಹಿರಿಯ ಅಧಿಕಾರಿಯೋರ್ವರು ಹೇಳಿದ್ದಾರೆ.
"ಮಹತೋ ಅವರು, ಮಾವೋವಾದಿ ಬೆಂಬಲಿತ ಪೀಪಲ್ ಅಗೈನ್ಸ್ಟ್ ಪೊಲೀಸ್ ಸಂಘಟನೆಯ ಸಂಚಾಲಕರಾಗಿದ್ದರು. ಛತ್ರಧರ್ ಮಹತೊ ಅವರ ಬಂಧನವು 2009ರಲ್ಲಿ ಸಿಪಿಎಂ ನಾಯಕ ಪ್ರಬೀರ್ ಮಹತೊ ಅವರ ಹತ್ಯೆಯ ಸಂಬಂಧ ನಡೆದಿದೆ" ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.