ಗೋವಾ, ಮಾ.28 (DaijiworldNews/PY): ಮಹಾರಾಷ್ಟ್ರ ಹಾಗೂ ತನ್ನ ನೆರೆಯ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಹಿನ್ನೆಲೆ ಕೊರೊನಾ ವೈರಸ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಗೋವಾ ಸರ್ಕಾರ, ಹೋಳಿ, ಈಸ್ಟರ್ ಹಾಗೂ ಈದ್ ಹಬ್ಬಗಳ ಆಚರಣೆಗೆ ನಿರ್ಬಂಧ ವಿಧಿಸಿದೆ.

ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಹೋಳಿ ಸೇರಿದಂತೆ ಈದ್ ಉಲ್-ಫಿತರ್, ಶಬ್ ಇ ಬರಾತ್, ಈಸ್ಟರ್ ಹಾಗೂ ಇತರೆ ಹಬ್ಬಗಳ ಆಚರಣೆಗೆ ನಿಷೇಧ ಹೇರಲಾಗಿದ್ದು, 144 ಸೆಕ್ಷನ್ ಜಾರಿ ಮಾಡಲಾಗಿದೆ.
ಗೋವಾದಲ್ಲಿ ಶನಿವಾರ ಒಂದೇ ದಿನ 170 ಹೊಸ ಕೊರೊನಾ ಪ್ರಕರಣಗಳ ಪತ್ತೆಯಾಗಿದ್ದು, ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 1,379 ಕ್ಕೆ ಏರಿಕೆಯಾಗಿದೆ.