ಬೆಂಗಳೂರು, ಮಾ.28 (DaijiworldNews/MB) : ''ಕೊರೊನಾ ಎರಡನೇ ಅಲೆ ಕರ್ನಾಟಕದಲ್ಲಿ ಪ್ರಾರಂಭವಾಗಿದೆ ಎಂದು ಹೇಳಿದ ರಾಜ್ಯದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಕಟ್ಟುನಿಟ್ಟಾಗಿ ಮಾರ್ಗಸೂಚಿ ಪಾಲಿಸಿ'' ಎಂದು ತಿಳಿಸಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ''ಎಲ್ಲಾ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ ಮತ್ತು ಇದು ಎರಡನೇ ಅಲೆಯ ಆರಂಭದ ಸೂಚನೆಯಾಗಿದೆ. ಜನರು ಎಚ್ಚರಿಕೆಯಿಂದ ಇರಬೇಕು. ಕೊರೊನಾ ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು'' ಎಂದು ಹೇಳಿದ್ದಾರೆ.
''8 ರಿಂದ 10 ರಾಜ್ಯಗಳು ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿವೆ, ಇದು ಸಾಕಷ್ಟು ಆತಂಕಕಾರಿ ಮತ್ತು ಗಂಭೀರ ವಿಚಾರ'' ಎಂದು ಹೇಳಿದರು.
"ಮಹಾರಾಷ್ಟ್ರದಲ್ಲಿ ಸುಮಾರು 2.84 ಲಕ್ಷ ಪ್ರಕರಣಗಳು, ಕೇರಳದಲ್ಲಿ 24,000, ಪಂಜಾಬ್ನಲ್ಲಿ 22,000 ಮತ್ತು ಕರ್ನಾಟಕದಲ್ಲಿ 19,000 ಪ್ರಕರಣಗಳಿವೆ. ಎರಡನೇ ಅಲೆ ಪ್ರಾರಂಭವಾಗಿದೆ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ ನಾವು ಚಟುವಟಿಕೆಗಳನ್ನು ತಡೆಯದಿದ್ದರೆ ಅಪಾಯ ತಪ್ಪಿದ್ದಲ್ಲ'' ಎಂದರು.