ಮುಕ್ತ್ಸಾರ್, ಮಾ.28 (DaijiworldNews/HR): ಪಂಜಾಬ್ ರಾಜ್ಯದ ಮುಕ್ತ್ಸಾರ್ ಜಿಲ್ಲೆಯ ಮಾಲೌಟ್ನ ರೈತರ ಗುಂಪೊಂದು ಬಿಜೆಪಿ ಶಾಸಕನ ಮೇಲೆ ಮುತ್ತಿಗೆ ಹಾಕಿ ಬಟ್ಟೆ ಹರಿದು ಹಾಕಿದ ಘಟನೆ ನಡೆದಿದೆ.
ಹಲ್ಲೆಗೊಳಗಾದ ಬಿಜೆಪಿ ಶಾಸಕನನ್ನು ಅರುಣ್ ನಾರಂಗ್ ಎಂದು ಗುರುತಿಸಲಾಗಿದೆ.
ಶಾಸಕ ಅರುಣ್ ನಾರಂಗ್ ಗಾಗಿ ಬಿಜೆಪಿ ಕಚೇರಿಯ ಮುಂದೆ ಪ್ರತಿಭಟನಾ ನಿರತ ರೈತರು ಕಾದು ಕುಳಿತಿದ್ದರು. ಅರುಣ್ ನಾರಂಗ್ ಬರುತ್ತಿದ್ದಂತೆ ರೈತರ ಗುಂಪು ಅವರತ್ತ ಕಪ್ಪು ಶಾಯಿ ಎರಚಿತು. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಮತ್ತು ಸ್ಥಳೀಯ ನಾಯಕರು ಶಾಸಕರನ್ನು ಹತ್ತಿರದ ಅಂಗಡಿಯೊಂದರ ಒಳಗೆ ಕರೆದೊಯ್ದರು ಎನ್ನಲಾಗಿದೆ.
ಸ್ವಲ್ಪ ಸಮಯದ ಬಳಿಕ ಶಾಸಕರು ಅಂಗಡಿಯಿಂದ ಹೊರಬರುತ್ತಿದ್ದಂತೆ ಮತ್ತೆ ಮುಗಿಬಿದ್ದ ಗುಂಪು ಹಲ್ಲೆ ನಡೆಸಿ ಶಾಸಕರ ಬಟ್ಟೆಯನ್ನು ಹರಿದು ಹಾಕಿದೆ. ಪೊಲೀಸರು ಕೂಡಲೇ ಮಧ್ಯ ಪ್ರವೇಶಿಸಿ ಶಾಸಕರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು ಎಂದು ವರದಿಯಾಗಿದೆ.