ಬೆಂಗಳೂರು, ಮಾ.27 (DaijiworldNews/HR): ಸಿ.ಡಿ ಯುವತಿಯು ಐದನೇ ವಿಡಿಯೋವನ್ನು ರಿಲೀಸ್ ಮಾಡಿದ್ದು, "ನನಗೆ ಏನೇನು ಅನ್ಯಾಯ ಮಾಡಿದ್ದಾರೆ ಎಂಬುದನ್ನು ಬಿಚ್ಚಿಡುತ್ತೇನೆ. ಜಡ್ಜ್ ಹತ್ತಿರ ಹೇಳಿಕೆ ಕೊಡುವುದಕ್ಕೆ ಅವಕಾಶ ಕೊಡಿ" ಎಂದು ಮನವಿ ಮಾಡಿಕೊಂಡಿದ್ದಾರೆ.
ನಮ್ಮ ಅಪ್ಪ ಅಮ್ಮನಿಗೆ ಏನೂ ಗೊತ್ತೇ ಇಲ್ಲ ಎಂದು ಹೇಳಿರುವ ಐದನೇ ವಿಡಿಯೋವನ್ನು ಬಿಡುಗಡೆ ಮಾಡಿರುವ ಸಿ.ಡಿ ಯುವತಿ, "ನನಗೆ ಎಲ್ಲೋ ಒಂದು ಕಡೆ ಭಯ ಆಗ್ತಾ ಇದೆ. ಅಪ್ಪ, ಅಮ್ಮನ ಮೇಲೆ ಪ್ರಭಾವ ಬೀರುತ್ತಿದ್ದಾರೆ. ನನ್ನ ಅಪ್ಪ, ಅಮ್ಮನಿಗೆ ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಹೊರಗೆ ಬಂದು ಹೇಳಿಕೆ ನೀಡಲು ಭಯ ಆಗುತ್ತಿದೆ. ನ್ಯಾಯ ಸಿಗಬೇಕಾಗಿರುವುದು ನನಗೆ ಎಂದು ಹೇಳಿದ್ದಾರೆ.
ಇನ್ನು ನಾನು ಹೊರಗಡೆ ಬಂದು ಹೇಳಿಕೆ ನೀಡಲು ಬೆಂಬಲಿಸಿ ಎಂದು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡುತ್ತೇನೆ. ಮುಂದೆ ಬಂದು ನಾನು ಹೇಳಿಕೆ ಕೊಡಲು ಸಹಕರಿಸಿ ಎಂದು ಕೇಳಿಕೊಂಡಿದ್ದಾರೆ.
ನನಗೆ ಏನೇನು ಅನ್ಯಾಯ ಮಾಡಿದ್ದಾರೆ ಅಂತಾ ಬಿಚ್ಚಿಡುತ್ತೇನೆ, ಹಾಗಾಗಿ ದಯವಿಟ್ಟು ಜಡ್ಜ್ ಹತ್ತಿರ ಹೇಳಿಕೆ ಕೊಡುವುದಕ್ಕೆ ಅವಕಾಶ ಕೊಡಿ ಎಂದು ಸಿಡಿಯಲ್ಲಿದ್ದ ಯುವತಿ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.