ಬೆಂಗಳೂರು, ಮಾ.27 (DaijiworldNews/HR): ಯುವತಿ ಆಗೊಂದು ಈಗೊಂದು ವಿಡಿಯೋ ಬಿಡುಗಡೆ ಮಾಡುವುದು ಸರಿಯಲ್ಲ, ಇದರಿಂದ ಕರ್ನಾಟಕದ ಜನ ಹಾಗೂ ಪೊಲೀಸರು ಗೊಂದಲದಲ್ಲಿದ್ದಾರೆ. ಹಾಗಾಗಿ ಯುವತಿ ಹೊರ ಬಂದು ಪೊಲೀಸರ ಎದುರು ಹೇಳಿಕೆ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಪೊಲೀಸರ ಸೂಕ್ತ ತನಿಖೆಯಿಂಗಾಗಿ ಸಿ.ಡಿ ವಿಚಾರದ ಸತ್ಯ ಏನಿದೆ ಎಂಬುದು ರಾಜ್ಯದ ಜನಕ್ಕೆ ಗೊತ್ತಾಗಬೇಕು. ಅಲ್ಲಿವರೆಗೂ ಪ್ರಕರಣಕ್ಕೆ ಮಹತ್ವ ಬರುವುದಿಲ್ಲ ಎಂದರು.
ಇನ್ನು ಆಡುಗೋಡಿ ಬಳಿ ಇರುವ ಎಸ್ಐಟಿ ಟೆಕ್ನಿಕಲ್ ಕಚೇರಿಯಲ್ಲಿ ಯುವತಿಯ ತಂದೆ ಪ್ರಕಾಶ್ ಹಾಗೂ ತಾಯಿ ಮತ್ತು ಸಹೋದರನ್ನು ಸುಮಾರು ನಾಲ್ಕು ಗಂಟೆಗಳ ಕಾಲ ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಡಿಸಿಪಿ ಅನುಚೇತ್, ರವಿಕುಮಾರ್, ಶರಣಪ್ಪ ಅವರ ನೇತೃತ್ವದ ತಂಡ ವಿಚಾರಣೆಗೆ ಒಳಪಡಿಸಿ, ಸಂಜೆ 5 ಗಂಟೆಗೆ ವಿಚಾರಣೆ ಮುಗಿಸಿದೆ ಎನ್ನಲಾಗಿದೆ.