ಬೆಂಗಳೂರು, ಮಾ.27 (DaijiworldNews/MB) : ರಾಜ್ಯ ರಾಜಕಾರಣದಲ್ಲಿ ತೀವ್ರ ತಲ್ಲಣ ಸೃಷ್ಟಿಸಿದ್ದ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಅಶ್ಲೀಲ ಸಿಡಿ ಪ್ರಕರಣ ಗಂಟೆಗೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಬೆನ್ನಲ್ಲೇ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಶನಿವಾರ ಸಂಜೆ 4 ರಿಂದ 6 ಗಂಟೆಯ ಒಳಗೆ ದೊಡ್ಡ ಬಾಂಬ್ ಸ್ಫೋಟವಾಗುತ್ತದೆ. ದೊಡ್ಡ ಮಟ್ಟದ ಬೆಳವಣಿಗೆ ಆಗಲಿದ್ದು, ನಾನೇ ಆಗ ಮಾತನಾಡುತ್ತೇನೆ ಎಂದು ರಮೇಶ್ ಜಾರಕಿಹೊಳಿ ಶುಕ್ರವಾರ ಹೇಳಿದ್ದರು. ಬಳಿಕ ೫ ಗಂಟೆಗೆ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸುವುದಾಗಿ ತಿಳಿಸಿದ್ದರು.
ಅದರಂತೆ ಸದಾಶಿವ ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ, ''ಶಾಸಕ ರಮೇಶ್ ಜಾರಕಿಹೊಳಿ ಅವರು, ಅಪ್ರಕರಣಕ್ಕೆ ಸಂಬಂಧಿಸಿ ನನ್ನ ಬಳಿ 11 ದಾಖಲೆಗಳಿವೆ. ಅದನ್ನು ನಾನು ಎಸ್ಐಟಿ ಅಧಿಕಾರಿಗಳಿಗೆಯೇ ನೀಡುತ್ತೇನೆ'' ಎಂದು ಹೇಳಿದರು.
''ಈಗ ಯುವತಿಯ ಪೋಷಕರೇ ಮಹಾನಾಯಕರು ಯಾರೆಂದು ರಿವೀಲ್ ಮಾಡಿದ್ದಾರೆ. ಇನ್ನು ನಾನು ಹೇಳುವುದು ಏನು ಇಲ್ಲ. ಡಿಕೆಶಿ ಅವರು ಇಂತಹ ಹೇಯ ರಾಜಕೀಯ ಮಾಡಬಾರದು. ಗಂಡಸರು ಇಂತಹ ಕೃತ್ಯ ಮಾಡಲ್ಲ. ಇದು ಷಂಡರ ಕೃತ್ಯ. ಅವರು ನಾಲಾಯಕ್ಕರು. ಮಾಹಾನಾಯಕರು ರಾಜಕೀಯದಿಂದ ಕೆಳಗಿಳಿಯುವುದು ಒಳ್ಳೆಯದು'' ಎಂದು ಅವಾಚ್ಯ ಪದಗಳಿಂದ ವಾಗ್ದಾಳಿ ನಡೆಸಿದರು.
''ಕನಕಪುರದಲ್ಲಿ ಡಿಕೆಶಿಯನ್ನು ಸೋಲಿಸದೆ ಬಿಡಲ್ಲ. ನಮ್ಮ ಊರಾದ ಬೆಳಗಾವಿಗೆ ಬಂದರೆ ನಾವು ಸ್ವಾಗತಿಸುತ್ತೇವೆ. ಆದರೆ ಕನಕಪುರ ಸೋಲಿಸದೆ ಬಿಡಲ್ಲ'' ಎಂದು ಹೇಳಿದರು.
''ಡಿಕೆ ಶಿವಕುಮಾರ್ನಂತಹ ಗಂಡಿಗೆ ರಾಜಕೀಯ ಹೇಳಿದ್ದಲ್ಲ. ಅವ ಗಂಡಸಲ್ಲ ನಾನು ಗಂಡಸು'' ಎಂದು ಕಿಡಿಕಾರಿದರು.
''ಡಿಕೆಶಿ ವಿರುದ್ದ ನಾನು ದೂರು ನೀಡುತ್ತೇನೆ. ಮಾನಹಾನಿ ದೂರು ನೀಡುತ್ತೇನೆ. ಅವನಿಗೆ ಯಾರು ಹೆದರುತ್ತಾರೆ'' ಎಂದು ಹೇಳಿದ ಅವರು ಯುವತಿಯ ಪೋಷಕರಿಗೆ ಧನ್ಯವಾದ ತಿಳಿಸಿದರು.
ರಮೇಶ್ ಜಾರಕಿ ಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಸಹೋದರರು ಪ್ರಕರಣ ಕುರಿತಾಗಿ ಖಾಸಗಿ ಡಿಟೆಕ್ಟರ್ ಗಳಿಂದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ ಎಂದು ಹೇಳಲಾಗಿದೆ.