ಬೆಂಗಳೂರು, ಮಾ.27 (DaijiworldNews/HR): ಮಾಜಿ ಸಚಿವ ಸತೀಶ್ ಜಾರಕಿಹೊಳೆ ಅವರ ಜೇಬಿನಲ್ಲಿರುವ ಬಾಂಬ್ ನಿಷ್ಕ್ರಿಯಗೊಳಿಸಿ, ಅವರನ್ನ ಬಂಧಿಸಿ ಜೀವ ಉಳಿಸಲಿ ಎಂದು ಕಾಂಗ್ರೆಸ್ ಹೇಳಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, "ಜೇಬಲ್ಲಿ ಬಾಂಬಿದೆ, ಜೇಬಲ್ಲಿ ಬಾಂಬಿದೆ" ಎಂದು ಆತ್ಮಹತ್ಯಾ ಬಾಂಬರ್ನಂತೆ ಹೇಳುತ್ತಿರುವ ಮಾಜಿ ಸಚಿವ ಜಾರಕಿಹೊಳೆ ಅವರಿಗೆ ಬಾಂಬ್ ಜೇಬಲ್ಲಿ ಸಿಡಿದರೆ ಬಲಿಯಾಗುವುದು ತಾವೇ ಎಂದು ತಿಳಿದಿದೆಯೇ?" ಎಂದು ಪ್ರಶ್ನಿಸಿದೆ.
ಇನ್ನು "ಕೂಡಲೇ ಪೊಲೀಸ್ ಇಲಾಖೆ ಬಾಂಬ್ ನಿಷ್ಕ್ರಿಯ ದಳದೊಂದಿಗೆ ಕಾರ್ಯಪ್ರವೃತ್ತವಾಗಲಿ, ಬಾಂಬ್ ನಿಷ್ಕ್ರಿಯಗೊಳಿಸಿ, ಅವರನ್ನ ಬಂಧಿಸಿ ಜೀವ ಉಳಿಸಲಿ" ಎಂದು ಹೇಳಿದೆ.