ಕೋಲ್ಕತ್ತಾ, ಮಾ.27 (DaijiworldNews/HR): ಇಂದು ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, ಪೂರ್ವ ಮಿಡ್ನಾಪುರದ ಸತ್ಸತ್ಮಾಲ್ ಭಗವನ್ ಪುರ್ ವಿಧಾನಸಭಾ ಕ್ಷೇತ್ರದಲ್ಲಿ ಗುಂಡಿನ ದಾಳಿ ನಡೆದು ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಸಾಂಧರ್ಭಿಕ ಚಿತ್ರ
ಈ ಘಟನೆ ಮತದಾನ ಆರಂಭವಾಗುವ ಮುನ್ನ ನಡೆದಿದ್ದು, ಟಿಎಂಸಿ ಜೊತೆ ಗುರುತಿಸಿಕೊಂಡಿರುವವರು ಅರ್ಗೊಲ್ ಪಂಚಾಯತ್ ಪ್ರದೇಶದಲ್ಲಿ ಜನರನ್ನು ಉಗ್ರರನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅನುಪ್ ಚಕ್ರವರ್ತಿ ಆರೋಪಿಸಿದ್ದಾರೆ ಎನ್ನಲಾಗಿದೆ.
ಪಶ್ಚಿಮ ಮಿಡ್ನಾಪುರದ ಶಲ್ಬೊನಿಯಲ್ಲಿ ಸಿಪಿಎಂ ಅಭ್ಯರ್ಥಿ ಸುಶಾಂತ ಘೋಷ್ ವಾಹನದ ಮೇಲೆ ಕೂಡ ದಾಳಿ ನಡೆದಿದೆ.
ಇನ್ನು ಪೂರ್ವ ಮಿಡ್ನಾಪುರದಲ್ಲಿ ತಾವು ಟಿಎಂಸಿಗೆ ಮತ ಹಾಕಿದ್ದರೂ ವಿವಿಪ್ಯಾಟ್ ನಲ್ಲಿ ಬಿಜೆಪಿ ಎಂದು ತೋರಿಸುತ್ತಿದೆ ಎಂದು ಮತದಾರರು ಆರೋಪಿಸಿದ್ದು, ಪೂರ್ವ ಮಿಡ್ನಾಪುರದ ದಕ್ಷಿಣ ಕ್ಷೇತ್ರದ ಮತಗಟ್ಟೆಯಲ್ಲಿ ಮತದಾನವನ್ನು ರದ್ದುಗೊಳಿಸಲಾಗಿದೆ.
ಇನ್ನೊಂದೆಡೆ ಯುವಕನ ಮೃತದೇಹ ಶನಿವಾರ ಬೆಳಗ್ಗೆ ಪಾಸ್ಚಿಮ್ ಮೇದಿನೀಪುರ ಜಿಲ್ಲೆಯ ಕೆಶಿಯಾರಿಯ ಬೆಗಂಪುರ್ ಪ್ರದೇಶದಲ್ಲಿ ಪತ್ತೆಯಾಗಿದ್ದು, ಬಿಜೆಪಿ ಬೆಂಬಲಿಗನಾಗಿದ್ದ ಈತನನ್ನು ಟಿಎಂಸಿ ಗೂಂಡಾಗಳು ಹತ್ಯೆ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ ಎನ್ನಲಾಗಿದೆ.