ಮುಂಬೈ, ಮಾ. 24 (DaijiworldNews/SM): ರಿಲಯನ್ಸ್ ದಿಗ್ಗಜ ಮುಖೇಶ್ ಅಂಬಾನಿಗೆ ಬಾಂಬ್ ಬೆದರಿಕೆ ಪ್ರಕರಣದಲ್ಲಿ ಈಗಾಗಲೇ ಮುಂಬೈ ಪೊಲೀಸ್ ಅಧಿಕಾರಿ ಈಗಾಗಲೇ ಅಮಾನತುಗೊಳಿಸಲಾಗಿದೆ. ಪೊಲೀಸ್ ಅಧಿಕಾರಿ ಸಚಿನ್ ವಾಜೆ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಕಾನೂನು ಬಾಹಿರ ಚಟುವಟಿಕೆಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯುಎಪಿಎ ಅಡಿಯಲ್ಲಿ, ಗರಿಷ್ಠ ಪೊಲೀಸ್ ಕಸ್ಟಡಿ 30 ದಿನಗಳವರೆಗೆ ಇರಬಹುದಾಗಿದೆ. ಅಲ್ಲದೆ, ಚಾರ್ಜ್ ಶೀಟ್ ಸಲ್ಲಿಕೆಯ ದಿನಗಳನ್ನು ತನಿಖಾ ಸಂಸ್ಥೆ ವಿಸ್ತರಿಸಬಹುದಾಗಿದೆ. ಇದರೊಂದಿಗೆ ಜಾಮೀನು ಪಡೆಯುವ ಅವಕಾಶ ಕೂಡ ಅಲ್ಪ ಕಠಿಣ ಎನ್ನಲಾಗಿದೆ.
ಫೆಬ್ರವರಿ 25 ರಂದು ಮುಂಬೈನ ಮುಖೇಶ್ ಅಂಬಾನಿ ಅವರ ಮನೆಯ ಬಳಿ ನಿಲ್ಲಿಸಿದ್ದ ಕಾರಿನಿಂದ ಸ್ಫೋಟಕ ವಸ್ತುಗಳನ್ನು ಪತ್ತೆ ಮಾಡಲಾಗಿದೆ ಎನ್ನುವ ಪ್ರಕರಣದಲ್ಲಿ ಅಪರಾಧ ಗುಪ್ತಚರ ಘಟಕದ (ಸಿಐಯು) ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಸಚಿನ್ ವಾಜೆ ಅವರನ್ನು ಬಂಧಿಸಲಾಗಿದೆ. ಮನ್ಸುಖ್ ಹಿರೇನ್ ಸಾವಿನ ಪ್ರಕರಣದಲ್ಲಿ ಅವರ ಹೆಸರು ಬಂದ ನಂತರ ವಾಜೆಯವರನ್ನು ಮಾರ್ಚ್ 25 ರವರೆಗೆ ಎನ್ಐಎ ವಶಕ್ಕೆ ಕಳುಹಿಸಲಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಮನೆಯ ಹೊರಗೆ ಸ್ಫೋಟಕಗಳನ್ನು ಹೊಂದಿರುವ ವಾಹನದ ಮಾಲೀಕ ಹಿರೇನ್ ಮಾರ್ಚ್ 5 ರಂದು ಥಾಣೆಯ ಕೊಲ್ಲಿಯಲ್ಲಿ ಶವವಾಗಿ ಪತ್ತೆಯಾಗಿದ್ದರು.