ಬೆಂಗಳೂರು, ಮಾ 24 (DaijiworldNews/MS): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡಬೇಕಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ಸೋಂಕು ಹೆಚ್ಚಳವಾದರೆ ನಾವೇನು ಮಾಡಲು ಸಾಧ್ಯವಿಲ್ಲ. ಹಾಗೆಂದು ನಮಗೇನು ಲಾಕ್ಡೌನ್ ಮಾಡೋಕೆ ಖುಷಿ ಅಲ್ಲ. ನಾನು ಲಾಕ್ ಮಾಡಬೇಕಾಗುತ್ತೆ, ಮುಖ್ಯಮಂತ್ರಿಗಳು ಏನು ಮಾಡೋಕ್ ಆಗಲ್ಲ. ಆ ಸನ್ನಿವೇಶಕ್ಕ ತಂದು ನಿಲ್ಲಿಸಿದ್ರೆ ನಾವೇನ್ ಮಾಡಬೇಕಾಗುತ್ತದೆ. ದೇಶದ ಅನೇಕ ಭಾಗಗಳಲ್ಲಿ ಲಾಕ್ಡೌನ್ ಏಕೆ ಆಗುತ್ತಿದೆ ಎಂಬುವುದನ್ನು ಜನರು ಅರ್ಥ ಮಾಡ್ಕೊಬೇಕು
ಭಾಗಶಃ ಲಾಕ್ಡೌನ್ ಮಾಡುವ ಉದ್ದೇಶ ನಮಗಿಲ್ಲ. ಆದರೆ, ಕೊರೊನಾ ಸೊಂಕು ಹೆಚ್ಚಾಗದಂತೆ ತಡೆಯಲು ಜನರ ಸಹಭಾಗಿತ್ವ ಬೇಕು. ರಾಜ್ಯದಲ್ಲಿ ಮತ್ತೆ ಕಂಟೇನ್ಮೆಂಟ್ ಜೋನ್ ಜಾರಿ ಮಾಡುವ ಕುರಿತಂತೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.