ಬೆಂಗಳೂರು, ಮಾ. 24 (DaijiworldNews/HR): "ಒಂದು ಬೆರಳು ಒಬ್ಬರ ಕಡೆ ತೋರಿಸಿದ್ರೆ, ಉಳಿದ ನಾಲ್ಕು ಬೆರಳು ನಮ್ಮ ಕಡೆಗೆ ತೋರಿಸುತ್ತದೆ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು. 224-225 ಜನರಲ್ಲಿ ಹೆಣ್ಣು ಮಕ್ಕಳು ಇದ್ದಾರೆ. ಅವರೆಲ್ಲರೂ ಶ್ರೀರಾಮಚಂದ್ರ, ಸೀತಾ ಮಾತೆಯರೇ ಅಲ್ಲ" ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, "224-225 ಜನರಲ್ಲಿ ಹೆಣ್ಣು ಮಕ್ಕಳು ಇದ್ದಾರೆ. ಎಲ್ಲರೂ ಶ್ರೀರಾಮಚಂದ್ರ, ಸೀತಾ ಮಾತೆಯರೇ ಅಲ್ಲ. ಯಾವ ಸಚಿವರು ಹೇಳಿಕೆ ನೀಡಿದ್ರೂ ಎಲ್ಲರೂ ಅವರವರ ಆತ್ಮ ಮುಟ್ಟಿ ನೋಡಿಕೊಳ್ಳಲಿ" ಎಂದರು.
ಇನ್ನು "ಒಂದು ಬೆರಳು ಒಬ್ಬರ ಕಡೆ ತೋರಿಸಿದ್ರೆ, ಉಳಿದ ನಾಲ್ಕು ಬೆರಳು ನಮ್ಮ ಕಡೆಗೆ ತೋರಿಸುತ್ವೆ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು. ಆದ್ದರಿಂದ ಸತ್ಯಹರಿಚಂದ್ರರಂತೆ ಮಾತನಾಡುವುದು ಸರಿಯಲ್ಲ. ಸುಮ್ಮನೆ ಮುಂದೆ ಹೋಗುವುದು ಒಳ್ಳೆಯದು" ಎಂದಿದ್ದಾರೆ.