ಬೆಂಗಳೂರು, ಮಾ 24 (DaijiworldNews/MS): ಯಾರು ಏನೇ ಹೇಳಲಿ. ನನಗಿರುವುದು ಒಬ್ಬಳೇ ಹೆಂಡತಿ, ಒಂದೇ ಸಂಸಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ ಸಚಿವ ಸುಧಾಕರ್ ಸವಾಲು ಹಾಕಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅವರು, ಆರೋಗ್ಯ ಸಚಿವರು ಇಡಿ ರಾಜ್ಯಕ್ಕೆ ಇಂದು ನುಡಿಮುತ್ತುಗಳನ್ನು ಕೊಟ್ಟಿದ್ದಾರೆ. ಈ ವಿಚಾರ ಸದನದಲ್ಲಿಯೇ ಚರ್ಚೆಯಾಗಬೇಕು ಎಂದು ಹೇಳಿದ್ದಾರೆ.
ಮಾಧ್ಯಮದ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು, ಯಾರು ಯಾವುದೇ ಹೇಳಿಕೆ ಕೊಡಲಿ ನನಗೆ ಮಾತ್ರ ಒಬ್ಬಳೇ ಹೆಂಡತಿ ಇರುವುದು , ಸಂಸಾರವು ಒಂದೇ ಇರುವುದು ಎಂದು ಹೇಳಿದ್ದಾರೆ.
ಸಿಡಿ ಕೇಸ್ ವಿಚಾರವಾಗಿ ಮಾತನಾಡಿದ್ದ ಸಚಿವ ಡಾ. ಕೆ. ಸುಧಾಕರ್ , ಯಾವ್ಯಾವ ಮುಖ್ಯಮಂತ್ರಿಗಳು ಅಧಿಕಾರದಲ್ಲಿದ್ದಾಗ ಏನು ಮಾಡಿದ್ದರು ಎಲ್ಲವೂ ತನಿಖೆ ಆಗಲಿ ಎಂದು ಸಲಹೆ ನೀಡಿದ್ದಾರೆ. ಯಾರಿಗೆಲ್ಲಾ ಅನೈತಿಕ ಸಂಬಂಧ ಇದೆ ಎಂಬುದು ತಿಳಿಯಲಿ. ಎಲ್ಲಾ ಮಂತ್ರಿಗಳದ್ದು, ವಿರೋಧ ಪಕ್ಷಗಳವರದ್ದು ತನಿಖೆ ಅಗಲಿ. ಎಲ್ಲಾ 225 ಶಾಸಕರದ್ದೂ ತನಿಖೆ ಆಗಿ ಹೋಗಲಿ. ಡಿಕೆಶಿ, ಕುಮಾರಸ್ವಾಮಿ, ರಮೇಶ್ ಕುಮಾರ್ ಸತ್ಯಹರಿಶ್ಚಂದ್ರರೇ? ಇವರೆಲ್ಲ ಏಕಪತ್ನಿ ವ್ರತ ಮಾಡುತ್ತಿದ್ದಾರಾ? ಯಾರು ಎಂಥವರು ಎಂಬ ಸತ್ಯ ಜನರಿಗೆ ಗೊತ್ತಾಗಲಿ ಎಂದು ಸುಧಾಕರ್ ಹೇಳಿದ್ದರು.