ನವದೆಹಲಿ,ಮಾ 24 (DaijiworldNews/MS): ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ), ಎಸ್ಎ ಬೊಬ್ಡೆ ಅವರು ಏಪ್ರಿಲ್ 23ರಂದು ನಿವೃತ್ತಿಯಾಗಲಿದ್ದು ಈ ಹಿನ್ನಲೆಯಲ್ಲಿ ಹಿರಿಯ-ನ್ಯಾಯಾಧೀಶ ಹಾಗೂ, ನ್ಯಾಯಮೂರ್ತಿಗಳಾದ ಎನ್.ವಿ.ರಮಣ ಅವರನ್ನು ದೇಶದ ಅತ್ಯುನ್ನತ ನ್ಯಾಯಾಂಗ ಹುದ್ದೆಗೆ ನೇಮಕ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.
ಈ ಶಿಫಾರಸನ್ನು ಕೇಂದ್ರ ಕಾನೂನು ಸಚಿವಾಲಯಕ್ಕೆ ನೀಡಲಾಗಿದ್ದು, ಶಿಫಾರಸು ಪತ್ರದ ಪ್ರತಿಯೊಂದನ್ನು ಅವರು ಶಿಫಾರಸ್ಸು ಮಾಡಿರುವ, ನ್ಯಾಯಮೂರ್ತಿ ರಮಣ ಅವರಿಗೆ ಹಸ್ತಾಂತರಿಸಲಾಗಿದೆ. ನ್ಯಾಯಮೂರ್ತಿ ರಮಣ ಅವರನ್ನು ಫೆಬ್ರವರಿ 17, 2014 ರಂದು ಸುಪ್ರೀಂ ಕೋರ್ಟ್ಗೆ ನೇಮಿಸಲಾಗಿತ್ತು.
ಅವರು ಏಪ್ರಿಲ್ 23, 2021 ರಂದು ಸಿಜೆಐ ಆಗಿ ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆಯಿದೆ. ಇವರು ಆಗಸ್ಟ್ 26, 2022 ರಂದು ನಿವೃತ್ತಿಯಾಗಲಿದ್ದು, ನ್ಯಾಯಮೂರ್ತಿ ರಮಣ ಅವರು ಸಿಜೆಐ ಆಗಿ ಅಧಿಕಾರ ವಹಿಸಿಕೊಂಡರೆ 16 ತಿಂಗಳ ಅಧಿಕಾರವಧಿಯನ್ನು ಹೊಂದಲಿದ್ದಾರೆ..
ಇದು ಒಂದು ದಶಕದಿಂದ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ದೀರ್ಘಾವಧಿಯ ಅಧಿಕಾರಾವಧಿಯಾಗಿದೆ. ದಿವಂಗತ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ಅವರು ಮೇ 2010 ರಿಂದ ಸೆಪ್ಟೆಂಬರ್ 2012 ರವರೆಗೆ ದೀರ್ಘಾವಧಿಯನ್ನು ಹೊಂದಿರುವ ಕೊನೆಯ ನ್ಯಾಯಾಧೀಶರಾಗಿದ್ದಾರೆ.