ನವದೆಹಲಿ, 24 (DaijiworldNews/HR): ಸುನಂದಾ ಪುಷ್ಕರ್ ಅವರ ಸಾವು ಆತ್ಮಹತ್ಯೆಯೂ ಅಲ್ಲ, ಕೊಲೆಯೂ ಅಲ್ಲವೆಂದು ಎಂದು ಖಚಿತವಾಗಿದ್ದು, ತಮ್ಮ ವಿರುದ್ಧದ ಆರೋಪ ಕೈಬಿಡುವಂತೆ ಕಾಂಗ್ರೆಸ್ ಮುಖಂಡ ಶಶಿ ತರೂರ್ ದೆಹಲಿ ಹೈ ಕೋರ್ಟ್ಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಶಶಿ ತರೂರ್ ವಿರುದ್ಧ ಐಪಿಸಿ ಸೆಕ್ಷನ್ 498ಎ ಹಾಗೂ ಐಪಿಸಿ 306 ಸಾಬೀತಾಗುವ ಯಾವುದೇ ಪುರಾವೆಗಳಿಲ್ಲ. ಸುನಂದಾ ಸಾವನ್ನು ಆಕಸ್ಮಿಕವೆಂದು ಪರಿಗಣಿಸಬೇಕು ಎಂದು ತರೂರ್ ಪರ ವಕೀಲ ಪಹ್ವಾ ಕೋರ್ಟ್ಗೆ ತಿಳಿಸಿದ್ದಾರೆ.
ಇನ್ನು ಸುನಾಂದಾ ಪುಷ್ಕರ್ ಅವರ ಸಾವು ಆತ್ಮಹತ್ಯೆಯೂ ಅಲ್ಲ, ಕೊಲೆಯೂ ಅಲ್ಲವೆಂದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿರುಉದಾಗಿ ಎಂದು ಪಹ್ವಾ ವಾದಿಸಿದ್ದಾರೆ.
ಮಾರ್ಚ್ 26ರಂದು ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಪುನರಾರಂಭಿಸಲಿದೆ ಎನ್ನಲಾಗಿದೆ.