ಮುಂಬೈ, ಮಾ 24 (DaijiworldNews/MS): ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ 100 ಕೋಟಿ ಲಂಚ ಸಂಗ್ರಹಣೆಗೆ ಆದೇಶಿದ್ದು ಇದರ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಸುಪ್ರಿಂ ಮೆಟ್ಟಿಲೇರಿದ್ದ ಮುಂಬೈ ಮಾಜಿ ಪೊಲೀಸ್ ಕಮಿಷನರ್ ಪರಮ್ ಬಿರ್ ಸಿಂಗ್ ಅವರ ಪ್ರಕರಣದ ವಿಚಾರಣೆಯನ್ನು ಇಂದು ಬೆಳಗ್ಗೆ ನಡೆಸಲಿದೆ.
ಕಳೆದ ತಿಂಗಳು ಫೆಬ್ರವರಿ ಮಧ್ಯಭಾಗದಲ್ಲಿ ಪೊಲೀಸ್ ಅಧಿಕಾರಿ ಸಚಿನ್ ವಾಜೆಯವರನ್ನು ಕರೆದು ಮುಂಬೈಯ ಹೊಟೇಲ್ ಮತ್ತು ಬಾರ್ ಗಳಿಂದ ಹಣ ಸಂಗ್ರಹಿಸುವಂತೆ ಅನಿಲ್ ದೇಶ್ ಮುಖ್ ಅವರು ಹೇಳಿದ್ದರು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಬರೆದ ಪತ್ರದಲ್ಲಿ ಈ ಹಿಂದಿನ ಮುಂಬೈ ಪೊಲೀಸ್ ಕಮಿಷನರ್ ಪರಮ್ ಬಿರ್ ಸಿಂಗ್ ಆರೋಪಿಸಿದ್ದರು. ಆದರೆ ಈ ಬಗ್ಗೆ ರಾಜ್ಯಸರ್ಕಾರ ಕ್ರಮ ಕೈಗೊಂಡಿಲ್ಲ , ತನಿಖೆಯನ್ನು ಸಿಬಿಐಗೆ ಒಪ್ಪಿಸಿ ಎಂದು ಪರಮ್ ಬಿರ್ ಸಿಂಗ್ ಸುಪ್ರೀಂ ಕದ ತಟ್ಟಿದರು.
ಈ ನಡುವೆ ಅಪಪ್ರಚಾರದ ಬಗ್ಗೆ ತೀವ್ರ ನೊಂದಿದ್ದು, ಪರಂ ಬಿರ್ ಸಿಂಗ್ ಅವರ ಆರೋಪದ ನಂತರ ಕಳೆದ ತಿಂಗಳು ಫೆಬ್ರವರಿ ಮಧ್ಯಭಾಗದಲ್ಲಿ ತಾವು ಆಸ್ಪತ್ರೆಯಲ್ಲಿದ್ದೆನು ಎಂದು ನೇರವಾಗಿ ಸಾಬೀತುಪಡಿಸಲು ಇಚ್ಛಿಸುತ್ತೇನೆ. ನನ್ನ ವ್ಯಕ್ತಿತ್ವಕ್ಕೆ ಮತ್ತು ಗೃಹ ಇಲಾಖೆಗೆ ಕುಂದು ತರುವ ರೀತಿಯಲ್ಲಿ ಹಲವು ಟೀಕೆಗಳು ಕೇಳಿಬರುತ್ತಿದ್ದು ಫೆಬ್ರವರಿ ಮಧ್ಯಭಾಗದಲ್ಲಿ ತಾವು ಆಸ್ಪತ್ರೆಯಲ್ಲಿದ್ದೆನು ಎಂದು ನೇರವಾಗಿ ಸಾಬೀತುಪಡಿಸಲು ಇಚ್ಛಿಸುತ್ತೇನೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.