ಬೆಂಗಳೂರು, ಮಾ 23(DaijiworldNews/MS): ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ಎನ್ನಲಾದ ಅಶ್ಲೀಲ ವಿಡಿಯೋ ಬಗೆಗಿನ ಚರ್ಚೆ ಮಂಗಳವಾರ ಸದನದಲ್ಲಿ ಭಾರೀ ಜೋರಾಗಿತ್ತು. ಕಾಂಗ್ರೆಸ್ ಸಿ.ಡಿ ವಿಚಾರಣೆ ಸಿ.ಡಿ ಪ್ರದರ್ಶಿಸಿ ಕಲಾಪಕ್ಕೆ ಅಡ್ಡಿಪಡಿಸಿತು. ನಂತರ ಕಾಂಗ್ರೆಸ್ ಜೊತೆ ಆಡಳಿತ ಪಕ್ಷದ ನಾಯಕರು ಸಂಧಾನಕ್ಕೆ ಮುಂದಾದರು.
ಇತ್ತಕಡೆ ಸೀಡಿ ಕೇಸ್ ತನಿಖೆಗೆ ಕಾಂಗ್ರೆಸ್ ಬಿಗಿಪಟ್ಟು ಹಿಡಿಯುತ್ತಿರುವಂತೆಯೇ ಎಸ್ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ, ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ವಿಧಾನಸೌಧಕ್ಕೆ ಆಗಮಿಸಿ ಗೃಹ ಸಚಿವ ಬೊಮ್ಮಾಯಿಯವರನ್ನು ಭೇಟಿಯಾಗಿದ್ದಾರೆ.ವಿಧಾನಸೌಧದಲ್ಲೇ ಗೃಹ ಸಚಿವ ಬೊಮ್ಮಾಯಿ ಅವರನ್ನು ಸೌಮೇಂದು ಮುಖರ್ಜಿ ಭೇಟಿಯಾಗಿ ಚರ್ಚೆ ನಡೆಸಿರೋದು ಭಾರೀ ಕುತೂಹಲ ಮೂಡಿಸಿದೆ.
ಇನ್ನು ಸದನದಲ್ಲಿ ಸತ್ಯ ಏನೆಂದು ಹೊರಬರಲು, ಹೈ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಿಬೇಕು, ಯುವತಿಗೆ ರಕ್ಷಣೆ ನೀಡಬೇಕು ಎನ್ನುವ ನಮ್ಮ ಬೇಡಿಕೆ ತೀರ ಸರಳವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪಟ್ಟು ಹಿಡಿದರು. ಆದರೆಇದಕ್ಕೆ ಬಿಜೆಪಿ ಸಮ್ಮತಿಸಲಿಲ್ಲ. ಈ ಹಿನ್ನೆಲೆ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಬಿಜೆಪಿ, ಕಾಂಗ್ರೆಸ್ ಜೊತೆ ಸಂಧಾನ ನಡೆಸಿತು. ಇನ್ನು ಪ್ರತಿಭಟನೆ ಜೋರಾಗುತ್ತಿದ್ದಂತೆ ಸ್ಪೀಕರ್ ಕಾಗೇರಿ ಸದನವನ್ನು ಮತ್ತೆ ಮುಂದೂಡಿದರು. ಮಧ್ಯಾಹ್ನ ಮೂರು ಗಂಟೆಗೆ ಕಲಾಪ ನಡೆಸುವುದಾಗಿ ತಿಳಿಸಿದರು.