ನವದೆಹಲಿ, ಮಾ 23(DaijiworldNews/MS): ಮದ್ಯಪಾನ ಸೇವನೆಯ ಕನಿಷ್ಠ ವಯೋಮಿತಿಯನ್ನು 25 ವರ್ಷದಿಂದ 21 ವರ್ಷಕ್ಕೆ ಇಳಿಸುವ ಪ್ರಸ್ತಾವನೆಗೆ ದೆಹಲಿ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಹೇಳಿದ್ದಾರೆ.
ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, " ದೆಹಲಿಯಲ್ಲಿ ಮದ್ಯಪಾನ ಮಾಡಲು ಕಾನೂನು ವಯಸ್ಸನ್ನು 25 ರಿಂದ 21 ಕ್ಕೆ ಇಳಿಸುವುದಾಗಿ ಘೋಷಿಸಿದ್ದಾರೆ. ಇಲ್ಲಿ ಕುಡಿಯಲು ಕಾನೂನುಬದ್ಧ ವಯಸ್ಸು ಈಗ 21 ಆಗಿರುತ್ತದೆ. ರಾಷ್ಟ್ರ ರಾಜಧಾನಿಯಲ್ಲಿ ಯಾವುದೇ ಹೊಸ ಮದ್ಯದಂಗಡಿಗಳನ್ನು ತೆರೆಯಲಾಗುವುದಿಲ್ಲ" ಎಂದು ಅಬಕಾರಿಯ ನೂತನ ನೀತಿಗಳನ್ನು ಶನಿವಾರ ದೆಹಲಿ ಸಚಿವ ಸಂಪುಟ ಸಭೆ ಅನುಮೋದಿಸಿದ ಬಳಿಕ ಮಾತನಾಡಿದರು.
ಮದ್ಯದ ಅಂಗಡಿಗಳಿಗೆ ಸರ್ಕಾರವೇ ಸಮನಾದ ವಿತರಣೆಯನ್ನು ನಡೆಸುವ ಮೂಲಕ ಮದ್ಯ ಮಾಫಿಯಾವನ್ನು ತಡೆಗಟ್ಟಲಾಗುತ್ತದೆ. ಅಬಕಾರಿ ಇಲಾಖೆಯಲ್ಲಿನ ಸುಧಾರಣೆಗಳ ನಂತರ ಶೇಕಡಾ 20 ರಷ್ಟು ಆದಾಯದ ಬೆಳವಣಿಗೆಯನ್ನು ಅಂದಾಜಿಸಲಾಗಿದೆ ಎಂದು ಅವರು ಹೇಳಿದರು.
ಈ ಅಬಕಾರಿಯ ನೂತನ ನೀತಿಗಳ ಪ್ರಕಾರ ಹೊಸ ಬಾರ್ಗಳ ಆರಂಭಕ್ಕೆ ಅನುಮತಿ ನೀಡುವುದಿಲ್ಲ. ಸರ್ಕಾರವೂ ಬಾರ್ಗಳನ್ನು ನಡೆಸುವುದಿಲ್ಲ ಎಂದಿದ್ದಾರೆ. ಈಗಾಗಲೇ ದಿಲ್ಲಿಯಲ್ಲಿನ ಶೇ.60 ಬಾರ್ಗಳು ಸರ್ಕಾರದ ಅಧೀನದಲ್ಲಿವೆ.