ನವದೆಹಲಿ, ಮಾ.23 (DaijiworldNews/PY): ಭಯೋತ್ಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ನಾಯಕ ವಹೀದ್ ಪಾರಾ ಹಾಗೂ ಇತರೆ ಇಬ್ಬರ ವಿರುದ್ದ ಪೂರಕ ಚಾರ್ಜ್ಶೀಟ್ ದಾಖಲಿಸಿದೆ. ಈ ಮೂಲಕ ಜಮ್ಮು-ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಹಾಗೂ ಅವರ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷಕ್ಕೆ ಹಿನ್ನಡೆಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರ ಪೊಲೀಸ್ ಅಧಿಕಾರಿ ದವೀಂದರ್ ಸಿಂಗ್ ಅವರನ್ನು ಅಮಾನತುಗೊಳಿಸಿದ್ದು, ಕಲೆದ ವರ್ಷ ಅವರನ್ನು ಬಂಧಿಸಲಾಗಿತ್ತು.
"ಹಿಜ್ಬ್-ಉಲ್-ಮುಜಾಹಿದ್ದೀನ್ ಉಗ್ರರಿಗೆ ವಹೀದ್ ಪಾರಾ ಹಣ ಸಂಗ್ರಹಿಸುವ ಹಾಗೂ ವರ್ಗಾವಣೆ ಮಾಡುವ ಭಾಗವಾಗಿದ್ದು, ಇದಕ್ಕೆ ಆಗ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಿಂಗ್ ಸಹಕರಿಸಿದ್ದರು ಎನ್ನುವ ಆರೋಪದ ಮೇರೆಗೆ ಕೇಂದ್ರ ಸಂಸ್ಥೆ ಅವರನ್ನು 2020 ರ ಜನವರಿಯಲ್ಲಿ ಬಂಧಿಸಿತ್ತು. ಕಳೆದ ವರ್ಷ ಜೂನ್ 19ರಂದು ಅವರಿಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಿತ್ತು" ಎಂದು ಎನ್ಎಐ ತಿಳಿಸಿದೆ.
ಎನ್ಐಎ ಕಳೆದ ವರ್ಷ ದವೀಂದರ್ ಸಿಂಗ್ ಸೇರಿದಂತೆ 6 ಆರೋಪಿಗಳ ವಿರುದ್ದ ಚಾರ್ಜ್ಶೀಟ್ ಸಲ್ಲಿಸಿದ್ದು, ಇದೀಗ ಜಮ್ಮುವಿನ ವಿಶೇಷ ನ್ಯಾಯಾಲಯದಲ್ಲಿ ವಹೀದ್ ಪಾರಾ, ಫಝುಲ್ ಹುಸೇನ್ ಪರಿಮೂ ಹಾಗೂ ಶಾಹೀನ್ ಅಹ್ಮದ್ ಲೋನ್ ವಿರುದ್ದ ಚಾರ್ಜ್ಶೀಟ್ ಸಲ್ಲಿಸಿದೆ.