ಹಾಸನ, ಮಾ.23 (DaijiworldNews/PY): ಸಹಪಾಠಿಗಳಿಂದ ನಿಂದನೆಗೊಳಗಾದ ವಿದ್ಯಾರ್ಥಿನಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಬಾಲಕನನ್ನು ಹರ್ಷಿತ್ ಗೌಡ (16) ಎಂದು ಗುರುತಿಸಲಾಗಿದೆ.
ಹರ್ಷಿತ್ ಹಾಸನದ ಕಂಚಮಾರನಹಳ್ಳಿ ಬಳಿಯ ಖಾಸಗಿ ಶಾಲೆಯಲ್ಲಿ 10 ನೇ ತರಗತಿ ಓದುತ್ತಿದ್ದ. ಒಂದು ವರ್ಷದ ಹಿಂದೆ ಆತನಿಗೆ ಸ್ಟ್ರೋಕ್ ಆಗಿದ್ದು, ಆತನ ಸಹಪಾಠಿಗಳು ಇದೇ ಕಾರಣವನ್ನು ಇಟ್ಟುಕೊಂಡು ಶಾಲೆಗೆ ಹೋದಾಗ ಆತನಿಗೆ ರೇಗಿಸುತ್ತಿದ್ದರಂತೆ. ಈ ವಿಚಾರದ ಬಗ್ಗೆ ಮಾರ್ಚ್19ರಂದು ಶಾಲೆಯಲ್ಲಿ ವಿದ್ಯಾರ್ಥಿಗಳ ಮಧ್ಯೆ ಗಲಾಟೆ ನಡೆದಿತ್ತು ಎನ್ನಲಾಗಿದೆ.
ಗಲಾಟೆ ನಡೆದ ಸಂದರ್ಭ ಶಿಕ್ಷಕರು ವಿದ್ಯಾರ್ಥಿಗಳಿಗೆ ಬುದ್ದಿ ಮಾತು ಹೇಳಿದ್ದರು. ಈ ಕಾರಣದಿಂದ ಬೇಸರಗೊಂಡ ಹರ್ಷಿತ್ ಶಾಲೆ ಬಿಟ್ಟು ಹೋಗಿದ್ದು, ಮನೆಗೆ ತೆರಳಿದ ಬಳಿಕ ಮನೆ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಬಳಿಕ ಆತ ದನ ಮೇಯಿಸಲು ಹೋದ ವೇಳೆ ಜಮೀನಲ್ಲಿ ಸಮೀಪ ಇದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆಯ ಬಗ್ಗೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821