ನವದೆಹಲಿ, ಮಾ.23 (DaijiworldNews/PY): ಮದ್ಯ ಸೇವನೆಯಿಂದ ಸಾವನ್ನಪ್ಪಿದ್ದ ವ್ಯಕ್ತಿಗೆ ವಿಮಾ ಹಕ್ಕು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಸಾಂದರ್ಭಿಕ ಚಿತ್ರ
"ವ್ಯಕ್ತಿಯು ಮದ್ಯ ಸೇವನೆಯಿಂದ ಮೃತಪಟ್ಟಿದ್ದಾನೆ ಎಂದು ದೃಢಪಟ್ಟಲ್ಲಿ, ಆತ ಪರಿಹಾರಕ್ಕೆ ಅರ್ಹನಲ್ಲ. ಒಂದು ವೇಳೆ ಆತ ಅಪಘಾತದಲ್ಲಿ ಸಾವನ್ನಪ್ಪಿದರೆ ಆತನಿಗೆ ವಿಮೆ ನೀಡಬಹುದು" ಎಂದು ನ್ಯಾಯಮೂರ್ತಿಗಳಾದ ಎಂ.ಎಂ ಶಾಂತ ಗೌಡರ್ ಹಾಗೂ ವಿನೀತ್ ಸರನ್ ತಿಳಿಸಿದ್ದಾರೆ.
"ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗದ ಆದೇಶವನ್ನು ನ್ಯಾಯಪೀಠ ಎತ್ತಿಹಿಡಿದಿದ್ದು, ಸಾವು ಆಕಸ್ಮಿಕವಲ್ಲ. ಆದ್ದರಿಂದ ವಿಮಾದ ನಿಯಮಗಳ ಪ್ರಕಾರ ಮೃತಪಟ್ಟವರ ಪ್ರಾಣಹಾನಿಯನ್ನು ಸರಿದೂಗಿಸಲು ಸಂಸ್ಥೆಗೆ ಯಾವುದೇ ಶಾಸಬದ್ದ ಹೊಣೆಗಾರಿಕೆ ಇಲ್ಲ" ಎಂದಿದೆ.
"ಎನ್ಸಿಡಿಆರ್ಸಿ ಎಪ್ರಿಲ್ 24, 2009 ರಂದು ಅಂಗೀಕರಿಸಿದ ಮಾಹಿತಿಗೆ ಹಸ್ತಕ್ಷೇಪ ಮಾಡಲು ಯಾವುದೇ ಕಾರಣವಿಲ್ಲ. ಹಿಂಸಾತ್ಮಕ ಅಥವಾ ಯಾವುದೇ ವಿಧಾನಗಳಿಂದ ಉಂಟಾದ ಅಪಘಾತದಿಂದ ವಿಮಾದಾರನಿಗೆ ಯಾವುದೇ ದೈಹಿಕ ಗಾಯವಾದಲ್ಲಿ ಮಾತ್ರ ವಿಮೆ ಕಂಪೆನಿಯು ವಿಮಾದಾರನಿಗೆ ನಷ್ಟವುಂಟು ಮಾಡುತ್ತದೆ" ಎಂದು ತಿಳಿಸಿದೆ. ವಿಮಾ ಪಾಲಿಸಿಯ ಪ್ರಕಾರ, ವಿಮಾದಾರನ ಆಕಸ್ಮಿಕ ಸಾವಿಗೆ ಮಾತ್ರ ನಷ್ಟ ನೀಡಬೇಕು.
ಹಿಮಾಚಲ ಪ್ರದೇಶ ರಾಜ್ಯ ಅರಣ್ಯ ನಿಗಮದಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಕಾನೂನು ಉತ್ತರಾಧಿಕಾರಿ ನಾರ್ಬಾದಾ ದೇವಿ ಸಲ್ಲಿಸಿದ್ದ ಮೇಲ್ಮನವಿಯ ಮೇರೆಗೆ ಉನ್ನತ ನ್ಯಾಯಾಲಯದ ತೀರ್ಪು ಬಂದಿದ್ದು, 1997ರ ಅಕ್ಟೋಬರ್ 7-8ರಂದು ಸಿಮ್ಲಾ ಜಿಲ್ಲೆಯ ಚೋಪಾಲ್ ಪಂಚಾಯತ್ನಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿದ್ದು, ಬಳಿಕ ಮರಣೋತ್ತರ ಪರೀಕ್ಷೆಯಲ್ಲಿ ಆತ ಮದ್ಯ ಸೇವನೆಯಿಂದ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿತ್ತು.
"ರಾಷ್ಟ್ರೀಯ ಆಯೋಗ ಮತ್ತು ರಾಜ್ಯ ಆಯೋಗವು, ಸಾವು ಆಕಸ್ಮಿಕವಲ್ಲ ಮತ್ತು ಮೇಲ್ಮನವಿಗಳ ಹಕ್ಕನ್ನು ಇತ್ಯರ್ಥಪಡಿಸಲು ವಿಮಾ ಕಂಪನಿಯು ಜವಾಬ್ದಾರನಾಗಿರುವುದಿಲ್ಲ" ಎಂದು ಉನ್ನತ ನ್ಯಾಯಾಲಯ ಹೇಳಿದೆ.