ನವದೆಹಲಿ, ಮಾ. 22 (DaijiworldNews/SM): ಲೋಕಸಭೆಯಲ್ಲಿ ರಾಷ್ಟ್ರೀಯ ರಾಜಧಾನಿ ಸರ್ಕಾರ (ತಿದ್ದುಪಡಿ) ಮಸೂದೆ-2021ಗೆ ಮಾ.22 ರಂದು ಅಂಗೀಕಾರ ನೀಡಲಾಗಿದೆ. ಆ ಮೂಲಕ ದೆಹಲಿಯ ಲೆಫ್ಟಿನೆಂಟ್ ಗೌರ್ನರ್ ಗೆ ಹೆಚ್ಚಿನ ಅಧಿಕಾರ ನೀಡುವ ಮಸೂದೆ ಅಂಗೀಕಾರಗೊಂಡಂತಾಗಿದೆ.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಲೆಫ್ಟಿನೆಂಟ್ ಗೌರ್ನರ್ ಅಧಿಕಾರ ವ್ಯಾಪ್ತಿ ದೆಹಲಿಯಲ್ಲಿ ಚುನಾಯಿತ ಸರ್ಕಾರಕ್ಕಿಂತ ಹೆಚ್ಚಿದೆ. ಈಗ ಈ ಕಾಯ್ದೆಯಿಂದ ಮತ್ತಷ್ಟು ಬಲ ಬರಲಿದೆ. ಇನ್ನು ಕೇಂದ್ರ ಸರಕಾರದ ನಿರ್ಧಾರವನ್ನು ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷ ವಿರೋಧಿಸಿದೆ. ದೆಹಲಿಯ ರಾಷ್ಟ್ರೀಯ ರಾಜಧಾನಿ ಸರ್ಕಾರ (ತಿದ್ದುಪಡಿ) ಮಸೂದೆ-2021ಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.
ಮಸೂದೆಯನ್ನು ಹಿಂಪಡೆಯುವುದಕ್ಕೆ ಕೇಜ್ರಿವಾಲ್ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಆಮ್ ಆದ್ಮಿ ಪಕ್ಷ ಮಸೂದೆ ಹಿಂಪಡೆಯುವುದಕ್ಕಾಗಿ ಮೋದಿ ಸರ್ಕಾರದ ಕಾಲಿಗೆ ಬೀಳುವುದಕ್ಕೂ ಸಿದ್ಧವಿದೆ ಎಂದು ಹೇಳಿದೆ.