ಸೂರತ್, ಮಾ.22 (DaijiworldNews/PY): "ಸೂರತ್ನ ಖತೋದರಾ ಪೊಲೀಸ್ ಠಾಣೆಯ ಆವರಣದಲ್ಲಿ ಮಾನವನ ಅಸ್ಥಿಪಂಜರ ಪತ್ತೆಯಾಗಿದೆ" ಎಂದು ಸೋಮವಾರ ಪೊಲೀಸರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಕ್ರೇನ್ನ ಸಹಾಯದಿಂದ ಆವರಣದಲ್ಲಿದ್ದ ವಾಹನಗಳನ್ನು ತೆಗೆಯುತ್ತಿದ್ದ ಸಂದರ್ಭ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದ್ದು, ತಲೆಬುರುಡೆ ಹಾಗೂ ಅಸ್ಥಪಂಜರದ ಕೆಳಗಿನ ಭಾಗಗಳು ಪತ್ತೆಯಾಗಿವೆ ಎಂದು ಪೊಲೀಸರು ಅಂದಾಜಿಸಿದ್ದಾರೆ.
"ಅಸ್ಥಿಪಂಜರವನ್ನು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯದ ತಜ್ಞರ ತಂಡ ಪರಿಶೀಲಿಸುತ್ತಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ" ಎಂದು ತಿಳಿಸಿದ್ದಾರೆ.
"ಠಾಣೆಯ ಆವರಣದಲ್ಲಿ ಎರಡು ವರ್ಷಗಳ ಬಳಿಕ ಸ್ವಚ್ಛತಾ ಕಾರ್ಯವನ್ನು ಮಾಡಲಾಗಿತ್ತು" ಎಂದಿದ್ದಾರೆ.