ಲಖನೌ, ಮಾ.22 (DaijiworldNews/HR): ಹತ್ರಾಸ್ನಲ್ಲಿ ದಲಿತ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಕೆಲವೊಂದು ಹೊಸ ವಿಷಯಗಳು ಬೆಳಕಿಗೆ ಬಂದಿದ್ದು, ಇದು ಉತ್ತರ ಪ್ರದೇಶ ಸರ್ಕಾರದ ಕಾರ್ಯವೈಖರಿ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕಿದೆ" ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಾಯಾವತಿ, "ನ್ಯಾಯ ಪಡೆಯಲು ಹತ್ರಾಸ್ ಸಂತ್ರಸ್ತೆಯ ಕುಟುಂಬ ಪಡುತ್ತಿರುವ ಕಷ್ಟದ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಈ ಪ್ರಕರಣದಲ್ಲಿ ಬೆಳಕಿಗೆ ಬಂದಿರುವ ಹೊಸ ವಿಷಯಗಳು ಉತ್ತರ ಪ್ರದೇಶ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಗಂಭೀರ ಸ್ವರೂಪದ ಪ್ರಶ್ನೆಗಳು ಎದ್ದು ನಿಂದಿದೆ" ಎಂದರು.
ಇನ್ನು "ಅಲಹಾಬಾದ್ ಹೈಕೋರ್ಟ್ನ ಈ ನಿರ್ದೇಶನವು ಉತ್ತರ ಪ್ರದೇಶ ಸರ್ಕಾರದ ನೆಮ್ಮದಿಯನ್ನು ಹಾಳುಮಾಡಿದ್ದು, ಉತ್ತರ ಪ್ರದೇಶದಲ್ಲಿ ಅಪರಾಧಿಗಳು ಆಳುತ್ತಾರೆ. ಇಲ್ಲಿ ನ್ಯಾಯ ಸಿಗುವುದು ಕಷ್ಟ ಎಂಬ ಗ್ರಹಿಕೆ ಜನಸಾಮಾನ್ಯರಲ್ಲಿದೆ" ಎಂದು ಹೇಳಿದ್ದಾರೆ.