ಮುಂಬೈ, ಮಾ.22 (DaijiworldNews/HR): ಆದಿವಾಸಿ ಹಕ್ಕುಗಳ ಹೋರಾಟಗಾರ ಸ್ಟ್ಯಾನ್ ಸ್ವಾಮಿ( 83 ) ಎಲ್ಗರ್ ಪರಿಷತ್- ಮಾವೋವಾದಿ ನಂಟು ಕೇಸಿನಲ್ಲಿ ಬಂಧಿಸಲ್ಪಟ್ಟಿದ್ದು, ಅವರಿಗೆ ಜಾಮೀನು ನೀಡಲು ಎನ್ಐಎ ವಿಶೇಷ ನ್ಯಾಯಾಲಯ ನಿರಾಕರಿಸಿದೆ.
ಸ್ಟ್ಯಾನ್ ಸ್ವಾಮಿ ವೈದ್ಯಕೀಯ ಆಧಾರದಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ನ್ಯಾಯಾಧೀಶ ಡಿ.ಇ.ಕೋಥಾಲಿಕರ್ ತಿರಸ್ಕರಿಸಿದ್ದಾರೆ ಎನನಲಾಗಿದೆ.
ಸ್ಟ್ಯಾನ್ ಸ್ವಾಮಿ ಅವರನ್ನು ಅಕ್ಟೋಬರ್ 2020ರಲ್ಲಿ ರಾಂಚಿಯಲ್ಲಿ ಬಂಧಿಸಲಾಗಿತ್ತು.
ಇನ್ನು ಸ್ವಾಮಿ ಅವರು ಪಾರ್ಕಿನ್ ಸನ್ಸ್ ಕಾಯಿಲೆಯಿಂದ ಬಳಲುತ್ತಿದ್ದು, ಎರಡು ಕಿವಿಗಳು ಕೇಳಿಸುತ್ತಿಲ್ಲ, ಅಲ್ಲದೇ ಇತರ ಅನಾರೋಗ್ಯದಿಂದ ನರಳುತ್ತಿರುವುದಾಗಿ ಸ್ವಾಮಿ ಪರ ವಕೀಲರು ತಿಳಿಸಿದ್ದಾರೆ.