ಹೈದರಾಬಾದ್, ಮಾ.22 (DaijiworldNews/PY): ಸರ್ಕಾರಿ ಉದ್ಯೋಗಿಗಳಿಗೆ ವೇತನ ಏರಿಕೆ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ವಿಧಾನಸಭೆಯಲ್ಲಿ ಘೋಷಣೆ ಮಾಡಿದ್ದು, "ಶೇ.30ರಷ್ಟು ವೇತನ ಏರಿಕೆ ಮಾಡಲಾಗುವುದು" ಎಂದು ತಿಳಿಸಿದ್ದಾರೆ.
"ರಾಜ್ಯದಲ್ಲಿ ಒಟ್ಟು 9.17 ಲಕ್ಷ ಸರ್ಕಾರಿ ಉದ್ಯೋಗಿಗಳಿದ್ದಾರೆ. ಇದು ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೂ ಅನ್ವಯಿಸಲಿದೆ. ಶೇ.80ರಷ್ಟು ಅರ್ಹ ಉದ್ಯೋಗಿಗಳಿಗೆ ಬಡ್ತಿ ನೀಡಲಾಗಿದ್ದು, ಶೀಘ್ರದಲ್ಲೇ ಉಳಿದ ನೌಕರರಿಗೂ ಕೂಡಾ ಬಡ್ತಿ ನೀಡಲಾಗುವುದು" ಎಂದು ಹೇಳಿದ್ದಾರೆ.
"ಶೀಘ್ರದಲ್ಲೇ ಬಡ್ತಿಯಿಂದ ತೆರವಾದ ಸ್ಥಾನಗಳಿಗೆ ನೂತನವಾಗಿ ನೋಟಿಫಿಕೇಷನ್ ಹೊರಡಿಸಲಾಗುತ್ತದೆ. ಶಿಕ್ಷಕರಿಗೂ ಕೂಡಾ ಶೀಘ್ರವೇ ಬಡ್ತಿ ನೀಡಲಾಗುವುದು" ಎಂದಿದ್ದಾರೆ.
ವೇತನ ಹೆಚ್ಚಳ ಮಾಡಬೇಕು ಎಂದು ವೇತನ ಆಯೋಗ ಶಿಪಾರಸ್ಸು ಮಾಡಿದ್ದು, ಶೇ.7.5 ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ತಿಳಿಸಿತ್ತು. ಆದರೆ, ಸರ್ಕಾರ ಶೇ.30ರಷ್ಟು ಮಾತ್ರವೇ ವೇತನ ಹೆಚ್ಚಳ ಮಾಡಿದೆ. ಈ ಕಾರಣದಿಂದ 8 ಸಾವಿರ ಕೋಟಿ. ರೂ. ಸರ್ಕಾರಕ್ಕೆ ಹೊರೆಯಾಗಲಿದೆ.
ಇದರೊಂದಿಗೆ ರಾಜ್ಯ ಸರ್ಕಾರಿ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನೂ ಏರಿಕೆ ಮಾಡಿದ್ದು, 58-61 ವರ್ಷಕ್ಕೆ ಹೆಚ್ಚಿಸಲಾಗಿದೆ.