ಡೆಹ್ರಾಡೂನ್, ಮಾ.22 (DaijiworldNews/HR): ಉತ್ತರಾಖಂಡದ ನೂತನ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಈ ಕುತಿತು ಟ್ವೀಟ್ ಮಾಡಿರುವ ರಾವತ್, "ನನಗೆ ಕೊರೊನಾ ಸೋಮ್ಕು ದೃಢಪಟ್ಟಿದ್ದು, ನಾನು ಆರಾಮವಾಗಿದ್ದೇನೆ, ಯಾವುದೇ ತೊಂದರೆ ಇಲ್ಲ. ವೈದ್ಯರ ಮಾರ್ಗದರ್ಶನದಲ್ಲಿ ನಾನು ಐಸೋಲೇಟ್ ಮಾಡಿಕೊಂಡಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ನನ್ನೊಂದಿಗೆ ಹತ್ತಿರದ ಸಂಪರ್ಕಕ್ಕೆ ಬಂದಂತಹವರು ಎಚ್ಚರವಾಗಿರಿ ಮತ್ತು ಪರೀಕ್ಷೆ ಮಾಡಿಸಿಕೊಳ್ಳಿ" ಎಂದು ಹೇಳಿದ್ದಾರೆ.
ಇನ್ನು ರವಿವಾರದಂದು ಸಿಎಂ ರಾವತ್ ಅವರು ರಾಮನಗರ ಮತ್ತು ಡೆಹರಾಡೂನ್ ಜಿಲ್ಲೆಯಲ್ಲಿ ನಡೆದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಲ್ಲದೆ ಗರ್ಜಿಯಾ ಮಂದಿರಕ್ಕೆ ಕೂಡ ಭೇಟಿ ನೀಡಿದ್ದರು. ಶನಿವಾರ ಹರಿದ್ವಾರದಲ್ಲಿ ಗಂಗಾಪೂಜೆ ಮಾಡಿದ ರಾವತ್ ಹಲವು ಸಂತರನ್ನು ಭೇಟಿ ಮಾಡಿದ್ದರು ಎನ್ನಲಾಗಿದೆ.