ನಂದಿಗ್ರಾಮ, ಮಾ.22 (DaijiworldNews/MB) : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೊರಗಿನವರು ಎಂದು ಬಿಜೆಪಿಯ ಸುವೇಂದು ಅಧಿಕಾರಿ ಹೇಳಿದ ಬೆನ್ನಲ್ಲೇ ದೀದಿ ನಂದಿಗ್ರಾಮದಲ್ಲಿ ಒಂದಲ್ಲ ಎರಡು ಮನೆಗಳನ್ನು ಬಾಡಿಗೆಗೆ ಪಡೆದಿದ್ದಾರೆ.
ಭಾನುವಾರ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದ ದೀದಿ, ಕ್ಷೇತ್ರದ ಹಲ್ದಿ ನದಿಯ ದಡದಲ್ಲಿ ತಮಗಾಗಿ ಶಾಶ್ವತ ಮನೆ ನಿರ್ಮಿಸುತ್ತೇನೆ, ಹೆಚ್ಚಿನ ಸಮಯ ಅಲ್ಲಿಗೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದರು. ಇದಕ್ಕೂ ಮುನ್ನ ಮಮತಾ ವಿರುದ್ಧ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ್ದ ಸುವೇಂದು ಅಧಿಕಾರಿ ದೀದಿ ಹೊರಗಿನವರು ಎಂದು ಹೇಳಿದ್ದರು.
ಇನ್ನು ಈ ನಡುವೆ ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದ ರಯಾಪರ ಪ್ರದೇಶದಲ್ಲಿ ಎರಡು ಮನೆಗಳನ್ನು ಬಾಡಿಗೆಗೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಒಂದು ಮನೆ ಒಂದು ವರ್ಷ ಬಾಡಿಗೆಗೆ ನೀಡಲಾಗಿದ್ದರೆ ಮತ್ತೊಂದು ಮನೆಯನ್ನು ಆರು ತಿಂಗಳವರೆಗೆ ಬಾಡಿಗೆಗೆ ನೀಡಲಾಗಿದೆ ಎಂದು ನೆರೆಹೊರೆಯವರು ತಿಳಿಸಿದ್ದಾರೆ.