ಬೆಂಗಳೂರು, ಮಾ.22 (DaijiworldNews/HR): ಕರ್ನಾಟಕದಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, 60 ವರ್ಷ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರು ಕೊರೊನಾ ಲಸಿಕೆ ಹಾಕಿಸಿಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "60 ವರ್ಷ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರು, 45 ರಿಂದ 60 ವರ್ಷದೊಳಗಿನ ಇತರೆ ಆರೋಗ್ಯ ಸಮಸ್ಯೆಯಿರುವವರು ಕೊರೊನಾ ಲಸಿಕೆಯನ್ನು ತಪ್ಪದೇ ಪಡೆಯಿರಿ" ಎಂದರು.
ಇನ್ನು "ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು, ಸ್ವಚ್ಛತೆ ಪಾಲಿಸೋಣ, ನಾವೆಲ್ಲರೂ ಕೂಡಿ ಕೊರೊನಾ ಹಿಮ್ಮೆಟ್ಟಿಸೋಣ" ಎಂದು ಹೇಳಿದ್ದಾರೆ.