ಹಾಸನ, ಮಾ.22 (DaijiworldNews/HR): ಮಾಜಿ ಶಿಕ್ಷಣ ಸಚಿವ, ಜೆ.ಡಿ.ಎಸ್ ಪಕ್ಷಕ್ಕೆ ಕ್ಷೇತ್ರದಲ್ಲಿ ಹಲವಾರು ಮುಖಂಡರನ್ನು ಬೆಳೆಸಿದ ನೇರ ನುಡಿ ನಾಯಕ ಬಿ.ಡಿ ಬಸವರಾಜ್(85) ಸೋಮವಾರ ಹಾಸನ ಜಿಲ್ಲೆಯ ಬಾಳ್ಳುಪೇಟೆಯಲ್ಲಿ ನಿಧನರಾಗಿದ್ದಾರೆ.
ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದ ಬಸವರಾಜ್, ದೇವೇಗೌಡರ ವಿರುದ್ಧ ಬಂಡಾಯವೆದ್ದು, ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಇನ್ನು ಮಾಜಿ ಸಚಿವ ಬಿ ಡಿ ಬಸವರಾಜ್ ಅವರ ಅಂತ್ಯಕ್ರಿಯೆ ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆಯಲ್ಲಿ ಸ್ವಗ್ರಾಮದಲ್ಲಿ ನೆಡೆಯಲಿದೆ ಎಂದು ತಿಳಿದು ಬಂದಿದೆ.