ಬೆಂಗಳೂರು, ಮಾ.22 (DaijiworldNews/HR): ಲೇಖಕಿ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್, ನಟ ಶಿವರಾಜ್ಕುಮಾರ್ ಹಾಗೂ ಇತರ ಪ್ರಮುಖರಿಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂಬುದು ನಮ್ಮ ಗಮನಕ್ಕೆ ಬಂದಿದ್ದು, ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳಲಿದೆ" ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೊಲೆ ಬೆದರಿಕೆಯ ಸಂಬಂಧ ದೂರು ದಾಖಲಾಗಿದ್ದು, ಇದರ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ" ಎಂದರು.
ಇನ್ನು "ಮೇ 1ಕ್ಕೆ ಹತ್ಯೆ ಮಾಡುವುದಕ್ಕೆ ನನಗೆ ಮುಹೂರ್ತ ಇಟ್ಟಿಡ್ಡು, ಅದೇ ದಿನ ನಟ ಶಿವರಾಜ್ಕುಮಾರ್, ಪಬ್ಲಿಕ್ ಟಿವಿ ಸಂಪಾದಕ ಎಚ್.ಆರ್.ರಂಗನಾಥ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಹತ್ಯೆ ಮಾಡುತ್ತಾರಂತೆ. ಈ ಬಗ್ಗೆ ಕರೀಂ ಚಳ್ಳಕೆರೆ ಎಂಬ ವ್ಯಕ್ತಿ ನನಗೆ ಪತ್ರ ಬರೆದಿದ್ದು, ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದೇನೆ. ಅವರು ಭದ್ರತೆ ಒದಗಿಸಿದ್ದಾರೆ" ಎಂದು ಲೇಖಕಿ ಬಿ.ಟಿ.ಲಲಿತಾ ನಾಯ್ಕ್ ಹೇಳಿದ್ದರು.