ಕೊಲ್ಕತ್ತಾ, ಮಾ.21 (DaijiworldNews/HR): "ನಾನು ದೊಡ್ಡ ಕತ್ತೆ, ಅಧಿಕಾರಿ ಕುಟುಂಬದ ನೈಜ ಮುಖವನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾನು ವಿಫಲಳಾಗಿದ್ದು ನನಗೆ ಗೊತ್ತಿಲ್ಲ. ಆದರೇ, ಅಧಿಕಾರಿ ಕುಟುಂಬ ಮೇದಿನಿಪುರ ಜಿಲ್ಲೆಯಲ್ಲಿ 5000 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಜನರು ಹೇಳುತ್ತಾರೆ. ಅವರು ಮತವನ್ನು ಹಣಕ್ಕೆ ಖರೀದಿ ಮಾಡುತ್ತಿದ್ದಾರೆ. ಅವರಿಗೆ ಮತ ಹಾಕಬೇಡಿ" ಎಂದು ತೃಣಮೂಲ ಕಾಂಗ್ರೆಸ್ ನ ನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಈ ಕುರಿತು ಚುನವಣಾ ಪ್ರಚಾರ ಸಭೆಯಲ್ಲಿ ನಂದಿಗ್ರಾಮದಲ್ಲಿ ತಮ್ಮೆದುರು ಸ್ಪರ್ಧೆ ಮಾಡಲಿರುವ ಪಶ್ಚಿಮ ಬಂಗಾಳದ ಈಗಿನ ಪ್ರಭಾವಿ ಬಿಜೆಪಿಯ ನಾಯಕ ಸುವೇಂದು ಅಧಿಕಾರಿಯವರನ್ನು ತರಾಟೆಗೆ ತೆಗದುಕೊಂಡಿರುವ ಮಮತಾ, "ಮೇದಿನಿ ಪುರ ಜಿಲ್ಲೆಯಲ್ಲಿ ಅಧಿಕಾರಿ ಕುಟುಂಬವು 5000 ಕೋಟಿಯಷ್ಟು ಮೌಲ್ಯದ ಸಾಮ್ರಾಜ್ಯ ಕಟ್ಟಿದ್ದಾರೆ ಎಂಬ ಮಾತುಗಳನ್ನು ಕೇಳಿದ್ದೇನೆ" ಎಂದರು.
"ಜಿಲ್ಲೆಯಲ್ಲಿ ಅತ್ಯಂತ ಪ್ರಭಾವವನ್ನು ಹೊಂದಿರುವ ಅಧಿಕಾರಿ ಕುಟುಂಬದ ಅನೇಕ ಸದಸ್ಯರು ಬಿಜೆಪಿಗೆ ಸೇರಿದ್ದು, ಅಥವಾ ಸೇರಲು ಇಚ್ಛಿಸಿದ್ದಾರೆ" ಎಂದಿದ್ದಾರೆ.
ಇನ್ನು ಅಧಿಕಾರಿ ಕುಟುಂಬವನ್ನು 'ಮಿರ್ ಜಾಫರ್' ಗೆ ಹೋಲಿಸಿದ ಮಮತಾ ಬ್ಯಾನರ್ಜಿ, "ಈ ಭಾಗದ ಜನರು ಅಧಿಕಾರಿ ಕುಟುಂಬವನ್ನು ಸಹಿಸಿಕೊಳ್ಳುವುದಿಲ್ಲ. ಜನರು ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.