ಮಡಿಕೇರಿ, ಮಾ.21 (DaijiworldNews/HR): "ಸಿ.ಡಿ ಪ್ರಕರಣಕ್ಕೂ ಬಾಂಬೆ ಟೀಂಗೂ ಯಾವುದೇ ಸಂಬಂಧ ಇಲ್ಲ, ಮತ್ತಷ್ಟು ಸಿಡಿಗಳು ಇವೆ ಎಂದು ಹೇಳಲಾಗುತ್ತಿದ್ದು, ಅವುಗಳನ್ನು ಬಿಡುಗಡೆ ಮಾಡಲಿ" ಎಂದು ಎಂಎಲ್ಸಿ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, "ರಾಜ್ಯ ಸರ್ಕಾರದಲ್ಲಿ ಒಮ್ಮೊಮ್ಮೆ ಒಂದೊಂದು ಕಾಲ ಬರುತ್ತದೆ ಅದರಂತೆ ಒಮ್ಮೆ ಮಳೆಗಾಲ, ಒಮ್ಮೆ ಚಳಿಗಾಲ, ಆದರೆ ಈಗ ಸಿ.ಡಿ ಕಾಲ ಬಂದಿದೆ. ಇನ್ನಷ್ಟು ಸಿಡಿ ಇದೆ ಎಂದು ಹೇಳುತ್ತಿರುವವರು ಬಿಡುಗಡೆ ಮಾಡಲಿ" ಎಂದರು.
ಇನ್ನು "ಸದ್ಯಕ್ಕೆ ಲಾಕ್ಡೌನ್ ಆಗುವುದು ಬೇಡ, ಒಂದು ವೇಳೆ ಆದರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಲಾಕ್ಡೌನ್ ಬದಲು ಸೂಕ್ತ ಕ್ರಮ ಕೈ ಗೊಳ್ಳುವುವ ಹೆಚ್ಚಿನ ಜವಾಬ್ದಾರಿ ನಮ್ಮ ಮೇಲೆ ಇದೆ" ಎಂದು ಹೇಳಿದ್ದಾರೆ.