ಕೋಲ್ಕತ್ತಾ, ಮಾ 21(DaijiworldNews/MS): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಸಚಿವ, ಅಮಿತ್ ಶಾ ಸಮ್ಮುಖದಲ್ಲಿ ತಮಲುಕ್ ಕ್ಷೇತ್ರದ ಸಂಸದ ಸಿಸಿರ್ ಅಧಿಕಾರಿ ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಪಶ್ಚಿಮ ಬಂಗಾಳದ ಪಶ್ಚಿಮ ಮೆಡಿನಿಪುರ್ ನ ಇಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಸೇರ್ಪಡೆ ಆದ ಅವರು, ಆಡಳಿತ ಪಕ್ಷವು ಬೇರೆ ಯಾವುದೇ ದಾರಿಯನ್ನು ಉಳಿಸಿಲ್ಲ. ಆಡಳಿತ ಪಕ್ಷ ನನಗೆ ಹಾಗೂ ನನ್ನ ಮಗನಿಗೆ ಅವಮಾನ ಮಾಡಿದೆ. ತೃಣಮೂಲ ಕಾಂಗ್ರೆಸ್ ಪಕ್ಷವೇ ನಮಗೆ ಬಿಜೆಪಿ ಸೇರುವ ಒತ್ತಡ ಸೃಷ್ಟಿಸಿದೆ.ತಮ್ಮ ಪುತ್ರ ಸುವೇಂದು ಅಧಿಕಾರಿ ನಂದಿಗ್ರಾಮದಲ್ಲಿ ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧೆಗೆ ಇಳಿದ ನಂತರ ತೃಣಮೂಲ ಕಾಂಗ್ರೆಸ್ ಸದಸ್ಯರಿಂದ ತಮ್ಮ ಕುಟುಂಬದವರಿಗೆ ಕಿರುಕುಳ ಹೆಚ್ಚಾದ್ದರಿಂದ ತಾವು ಬಿಜೆಪಿ ಸೇರುತ್ತಿರುವುದಾಗಿ ಸಭೆಯನ್ನುದ್ದೇಶಿಸಿ ಸಿಸಿರ್ ಅಧಿಕಾರಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಕೈಗಾರೀಕರಣ ಮತ್ತು ಆಳ ಸಮುದ್ರ ಬಂದರು ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಬೇಕು, ತಮ್ಮ ಪುತ್ರ ಸುವೇಂದು ಹಲವು ಮತಗಳ ಅಂತರದಲ್ಲಿ ಮಮತಾ ವಿರುದ್ದ ಗೆಲ್ಲಲಿ ಎಂದು ಸಿಸಿರ್ ಅಧಿಕಾರಿ ಆಶಿಸಿದರು.