ಬೊಕಾಖಾಟ್, ಮಾ.21 (DaijiworldNews/HR): ಅಸ್ಸಾಂನಲ್ಲಿ ಮತ್ತೆ ಎರಡನೇ ಬಾರಿಗೆ ಬಿಜೆಪಿ ಸರ್ಕಾರ ತನ್ನ ಆಡಳಿತವನ್ನು ಮುಂದುವರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಕುರಿತು ಅಸ್ಸಾಂನ ಬೊಕಾಖಾಟ್ನಲ್ಲಿ ನಡೆದ ವಿಧಾನಸಭಾ ಚುನವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಅಸ್ಸಾಂನಲ್ಲಿ ಎರಡನೇ ಬಾರಿ ಬಿಜೆಪಿ ಅಧಿಕಾರ ಹಿಡಿಯಲಿದ್ದು, 'ದೂಸ್ರಿ ಬಾರ್ ಬಿಜೆಪಿ ಸರ್ಕಾರ್', 'ದೂಸ್ರಿ ಬಾರ್ ಎನ್ಡಿಎ ಸರ್ಕಾರ್', 'ದೂಸ್ರಿ ಬಾರ್ ಡಬಲ್ ಎಂಜಿನ್ ಕಿ ಸರ್ಕಾರ್' ಎಂದರು.
"ಖಡ್ಗಮೃಗ ಬೇಟೆಗಾರರನ್ನು ಎನ್ಡಿಎ ಸರ್ಕಾರ ಜೈಲಿನಲ್ಲಿರಿಸಿದ್ದು, ನಾವು ಅಸ್ಸಾಂನ ಪ್ರಾಣಿ ಪಕ್ಷಿಗಳ ಸಂರಕ್ಷಣೆಯ ಜೊತೆಗೆ, ಜನರಿಗೆ ಬೇಕಾದ ಸೌಲಭ್ಯಗಳನ್ನು ಕೂಡ ಒದಗಿಸಿದ್ದೇವೆ" ಎಂದಿದ್ದಾರೆ.
ಇನ್ನು ಅಸ್ಸಾಂನಲ್ಲಿ ಬಿಜೆಪಿ ಆಡಳಿತದಲ್ಲಿ ಅರಣ್ಯ ವ್ಯಾಪ್ತಿಗೆ ಸಂಬಂಧಪಟ್ಟಂತೆ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಯಾಗಿದದು, ಇದು ಪ್ರವಾಸೋದ್ಯಮಕ್ಕೆ ಹಾಗೂ ಆರ್ಥಿಕ ಚಟುವಟಿಕೆಗೆ ಪ್ರೋತ್ಸಾಹವನ್ನು ನೀಡಿದೆ. ನೈಸರ್ಗಿಕ, ಆದ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಪಾರಂಪರಿಕ ಪ್ರವಾಸೋದ್ಯಮಗಳಲ್ಲಿ ಭಾರತವನ್ನು ಪ್ರಮುಖ ರಾಷ್ಟ್ರಗಳಲ್ಲಿ ಸೇರಿಸಬೇಕೆಂದು ನಾವು ಬಯಸುತ್ತೇವೆ" ಎಂದು ಹೇಳಿದ್ದಾರೆ.