ವಿಜಯಪುರ, ಮಾ.21 (DaijiworldNews/PY): "ಪಕ್ಷ ಉಳಿಯಬೇಕೆಂದರೆ ಸಿಎಂ ಬದಲಾವಣೆ ಅವಶ್ಯಕ. ಸಿಎಂ ಬದಲಾವಣೆ ನೂರಕ್ಕೆ ನೂರರಷ್ಟು ಖಚಿತ" ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, "ಸಿಎಂ ಬದಲಾವಣೆ ಆಗುವುದಂತು ಖಚಿತ. ಪಂಚರಾಜ್ಯಗಳ ಚುನಾವಣೆಯ ನಂತರ ಯಾರ ಮಾತು ನಿಜ ಎಂದು ತಿಳಿಯುತ್ತದೆ. ಈ ಮುಖ್ಯಮಂತ್ರಿಯನ್ನು ಇಟ್ಟುಕೊಂಡು ಚುನಾವಣೆಗೆ ಹೋದರೆ ಅಷ್ಟೇ. ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಬೇಕು. ಬಿಜೆಪಿ ಪಕ್ಷ ಉಳಿಯಬೇಕು ಎಂದರೆ ಸಿಎಂ ಬದಲಾವಣೆ ಅವಶ್ಯಕ" ಎಂದಿದ್ದಾರೆ.
ಯತ್ನಾಳ್ ಅವರು ಸಿಎಂ ಬಿಎಸ್ವೈ ಅವರ ವಿರುದ್ದ ಈ ರೀತಿಯಾದ ಹೇಳಿಕೆ ನೀಡಿರುವುದು ಇದೇ ಮೊದಲ ಬಾರಿ ಅಲ್ಲ. ಬಿಎಸ್ವೈ ಹಾಗೂ ವಿಜಯೇಂದ್ರ ಅವರ ವಿರುದ್ದ ಯತ್ನಾಳ್ ಅರು ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ. ಪಂಚಮಸಾಲಿ ಸಮುದಾಯದ ಸಮಾವೇಶದಲ್ಲಿ ರಾಜ್ಯ ಸರ್ಕಾರ ಹಾಗೂ ಸಿಎಂ ಬಿಎಸ್ವೈ ಅವರ ವಿರುದ್ದ ನಾಲಿಗೆ ಹರಿಬಿಟ್ಟಿದ್ದರು. ಬಳಿಕ ಹೈಕಮಾಂಡ್ ದೆಹಲಿಗೆ ಬುಲಾವ್ ಕೊಟ್ಟಿತ್ತು.