ಬೆಂಗಳೂರು, ಮಾ.21 (DaijiworldNews/HR): ಪಾಕಿಸ್ತಾನಗೆ ಉಚಿತ ಕೊರೊನಾ ಲಸಿಕೆ ನೀಡಿ ಔದಾರ್ಯತೆ ಮೆರೆದರು, ಭಾರತೀಯರ ಬಗ್ಗೆಯೂ ಸ್ವಲ್ಪ ಕಾಳಜಿ ತೋರಿ ಎಂದು ನರೇಂದ್ರ ಮೋದಿಯವರ ಕುರಿತು ಕಾಂಗ್ರೆಸ್ ಹೇಳಿದೆ.
ನರೇಂದ್ರ ಮೋದಿಯವರು ಪಾಕ್ ಪಿಎಂ ಕೊರೊನಾದಿಂದ ಗುಣವಾಗಲಿ ಎಂದು ಟ್ವೀಟ್ ಮಾಡಿದ್ದನ್ನು ರೀ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, "ಪಾಕಿಸ್ತಾನದ ಪ್ರಧಾನ ಮಂತ್ರಿಯ ಮಗಳ ಮದುವೆಗೆ ಹೋಗಿ ಬಂದಿದ್ದಾರೆ, ಜೊತೆಗೆ ಪಾಕ್ ಪಿಎಂರಿಂದ ಸೀರೆ ಕೂಡ ಉಡುಗೊರೆ ಪಡೆದಿದ್ದಾರೆ ಆದರೆ ಭಾರತದಲ್ಲಿ 300 ರೈತರು ಸತ್ತಿರುವುದು ಪ್ರಧಾನಿ ಮೋದಿಯವರಿಗೆ ಕಾಣುತ್ತಿಲ್ಲ" ಎಂದಿದೆ.
ಇನ್ನು "ಪಾಕ್ ಪ್ರಧಾನಿ ಹೃದಯ ಶಸ್ತ್ರ ಚಿಕಿತ್ಸೆ ಆದಾಗ ಹಾರೈಸಿತ್ತಾರೆ, ಜೊತೆಗೆ ಕೊರೊನಾದಿಂದ ಗುಣವಾಗಲಿ ಎಂದು ಶುಭ ಹಾರೈಸುತ್ತಾರೆ, ಅಂತೆಯೇ ಭಾರತೀಯರಿಗೂ ಸ್ವಲ್ಪ ಕಾಳಜಿ ತೋರಿ ಪ್ರಧಾನಿ ನರೇಂದ್ರ ಮೋದಿ" ಎಂದು ಟ್ವೀಟ್ ಮಾಡಿದೆ.