ಬಳ್ಳಾರಿ, ಮಾ.21 (DaijiworldNews/PY): ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆಗೆ ಇನ್ನೂ ಮೂರು ವರ್ಷ ಬಾಕಿ ಇದೆ. ಕೆಲವು ರಾಜಕಾರಣಿಗಳ ಬೆಂಬಲಿಗರು ಈಗಿನಿಂದಲೇ ಮುಂದಿನ ಬಾರಿ ತಮ್ಮ ಮುಖಂಡರೇ ಅಧಿಕಾರಿ ವಹಿಸಿಕೊಳ್ಳಬೇಕು ಎಂದು ಬಯಸುತ್ತಿದ್ದು, ಈ ನಡುವೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಅಭಿಮಾನಿಗಳು ವಿಶೇಷ ಹರಕೆ ತೀರಿಸಿದ್ದಾರೆ.
ಸಿದ್ದರಾಮಯ್ಯ ಅಭಿಮಾನಿ ವಿರೇಶ್ ಎನ್ನುವವರು ರಥೋತ್ಸವದ ಸಂದರ್ಭ ಮತ್ತೆ ಸಿದ್ದರಾಮಯ್ಯ ಅವರು ಸಿಎಂ ಆಗಲಿ ಎಂದು ಬಾಳೆಹಣ್ಣು ಎಸೆದು ಹರಕೆ ತೀರಿಸಿದ್ದಾರೆ.
ಬಳ್ಳಾರಿ ತಾಲೂಕಿನ ಗೋನಾಳ್ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಗಾಧಿಲಿಂಗೇಶ್ವರ ರಥೋತ್ಸವದ ಸಂದರ್ಭ ವಿರೇಶ್ ಅವರು, ಬಾಳೆಹಣ್ಣಿನ ಮೇಲೆ Next CM ಸಿದ್ದರಾಮಯ್ಯ ಎಂದು ಬರೆದು, ರಥೋತ್ಸವದ ಸಂದರ್ಭ ಎಸೆದಿದ್ದಾರೆ.
ಈಗಿನಿಂದಲೇ ಸಿದ್ದರಾಮಯ್ಯ ಅಭಿಮಾನಿಗಳು ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಆಗಲಿ ಎಂದು ಹರಕೆ ತೀರಿಸುತ್ತಿದ್ದು, ಬಾಳೆಹಣ್ಣಿನ ಮುಲಕ ಹರಕೆ ತೀರಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.