ಹಾಸನ, ಮಾ.21 (DaijiworldNews/HR): ಹಾಸನ ಜಿಲ್ಲೆಯ ಅರಕಲಗೋಡು ತಾಲೂಕಿನಲ್ಲಿ ಆಸಿಡ್ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಜೀವ ದಹನಗೊಂಡ ಘಟನೆ ನಡೆದಿದೆ.
ಸಾಂಧರ್ಭಿಕ ಚಿತ್ರ
ಮೃತಪಟ್ಟವರನ್ನು ಲಾರಿ ಚಾಲಕ ಪುಟ್ಟರಾಜು(42) ಪ್ರಮೋದ್ (18), ಪರಮೇಶ್ (40) ಎಂದು ಗುರುತಿಸಲಾಗಿದೆ.
ಈ ಅಪಘಾತ ಬಸವನಹಳ್ಳಿ ಬಳಿ ಸಂಭವಿಸಿದ್ದು, ಲಾರಿ ಪಲ್ಟಿಯಾಗಿ ಆಸಿಡ್ ಚೆಲ್ಲಿದ ಪರಿಣಾಮ ಬೆಂಕಿ ಹೊತ್ತಿಕೊಂಡು ಇಬ್ಬರು ಸಜೀವ ದಹನಗೊಂಡಿದ್ದಾರೆ.
ಇನ್ನು ಓರ್ವ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೇ ಆತನೂ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.