ಹುಬ್ಬಳ್ಳಿ, ಮಾ.21 (DaijiworldNews/PY): "ಕೊರೊನಾ ನಡುವೆ ನಾವು ಬದುಕಬೇಕಿದೆ. ಹಾಗಾಗಿ ನಾವು ಮುಂಜಾಗ್ರತಾ ಕ್ರಮ ಕೈಗೊಂಡು ಮುಂದೆ ಸಾಗಬೇಕಿದೆ. ಲಾಕ್ಡೌನ್ ಹಾಗೂ ಸೆಮಿ ಲಾಕ್ಡೌನ್ನ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ" ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ಶನಿವಾರ ಛಬ್ಬಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಅವರು ರವಿವಾರ ಬೆಳಗ್ಗೆ ಹಿರೇಕೆರೆಯಲ್ಲಿ ವಾಯುವಿಹಾರಕ್ಕೆ ತೆರಳಿದ್ದ ಸಂದರ್ಭ ಮಾತನಾಡಿದ ಅವರು, "ಉತ್ತರ ಕಾರ್ನಟಕದ ಜನತೆಯ ಸಂಭ್ರಮ ನನ್ನ ಸಂತೋಷವನ್ನು ಇಮ್ಮಡಿಗೊಳಿಸಿದೆ" ಎಂದು ಹೇಳಿದರು.
"ಗ್ರಾಮದಲ್ಲಿ ಮೋಡ ಕವಿದ ವಾತಾವರಣವಿದ್ದು, ಮಲೆನಾಡಿನಂತೆ ಭಾಸವಾಗುತ್ತಿದೆ. ಇಲ್ಲಿನ ವಾತಾವಣವನ್ನು ಗಮನಿಸಿದರೆ ಹುಬ್ಬಳ್ಳಿಯಲ್ಲಿ ಇದ್ದೇನೆ ಎಂದು ಅನಿಸುವುದೇ ಇಲ್ಲ. ಅಧಿಕಾರಿಗಳ ಹಾಗೂ ಜನರ ನಡುವಿನ ಕಂದಕ ಕಡಿಮೆ ಮಾಡುವುದೇ ಗ್ರಾಮ ವಾಸ್ತವ್ಯದ ಉದ್ದೇಶವಾಗಿದೆ" ಎಂದರು.
"ಅಧಿಕಾರಿಗಳು ಮನಸ್ಸು ಮಾಡಿ ಹಳ್ಳಿ ಜನರ ಸಮಸ್ಯೆಗಳನ್ನು ನಿವಾರಿಸಿದರೆ ಉತ್ತರ ಕರ್ನಾಟಕದ ಜನರು ನಮ್ಮನ್ನು ಎತ್ತಿ ಮೆರೆದಾಡುತ್ತಿದ್ದರು. ಹಾಗಾಗಿ ಉತ್ತರ ಕರ್ನಾಟಕದ ಮಂದಿಗೆ ನಾವು ಮತ್ತಷ್ಟು ಹತ್ತಿರವಾಗಬೇಕು. ಇದರಿಂದ ಹಳ್ಳಿಯ ಜನರಿಗೆ ನೆರವಾಗುತ್ತದೆ" ಎಂದು ಹೇಳಿದರು.