ಬೇಗುಸರಾಯ್, ಮಾ.21 (DaijiworldNews/HR): ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ 12 ವರ್ಷದ ಬಾಲಕಿ ಆಡುತ್ತಿದ್ದ ವೇಳೆ ಮನೆತಯಂಗಳದಲ್ಲಿದ್ದ ಕಿಡವೊಂದನ್ನು ಕಿತ್ತ ತಪ್ಪಿಗೆ ಸೀಮೆಎಣ್ಣೆ ಸುರಿದು ಸುಟ್ಟು ಹಾಕಿದ ಘಟನೆ ನಡೆದಿದೆ.
ಸಾಂಧರ್ಭಿಕ ಚಿತ್ರ
ಬಾಲಕಿಯನ್ನು ಸುಟ್ಟುಹಾಕಿದ ಆರೋಪಿಯನ್ನು ಸಿಖಂದರ್ ಯಾದವ್ ಎಂದು ಗುರುತಿಸಲಾಗಿದೆ.
ಬಾಲಕಿಯು ಸಿಖಂದರ್ ಯಾದವ್ ನ ಮನೆಯ ಎದುರು ಆಡುತ್ತಿದ್ದು, ಈ ವೇಳೆ ಅಕಸ್ಮಾತ್ ಆಗಿ ಗಿಡವೊಂದನ್ನು ಕಿತ್ತಳು. ಇದನ್ನು ಗಮನಿಸಿದ ಸಿಖಂದರ್, ಆತನ ಪತ್ನಿ ಮತ್ತು ಆತನ ಮಗಳು ಬಾಲಕಿಗೆ ಹಲ್ಲೆ ನಡೆಸಿ ಬಳಿಕ ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.
ಇನ್ನು ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಿಖಂದರ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.