ಬೆಂಗಳೂರು, ಮಾ 21(DaijiworldNews/MS): ಮತಾಂತರ ದೃಷ್ಟಿಯಿಂದ ಯುವತಿಯರಿಗೆ ಆಮಿಷ ಒಡ್ಡಿ ಮೋಸದಿಂದ ವಿವಾಹವಾಗುವುದನ್ನು (ಲವ್ ಜಿಹಾದ್) ಸಹಿಸಲು ಸಾಧ್ಯವೇ ಇಲ್ಲ. ಆದರೆ ಸಹಬಾಳ್ವೆಗಾಗಿ ಅಂತರ್ಜಾತಿ ವಿವಾಹವನ್ನು ಆರೆಸ್ಸೆಸ್ ಎಂದೂ ವಿರೋಧಿಸುವುದಿಲ್ಲ.ಹಿಂದೂ ಸಮಾಜ ಒಂದು ಎಂಬುವುದನ್ನು ಆರೆಸ್ಸೆಸ್ ಪ್ರತಿಪಾದಿಸುತ್ತದೆ ಎಂದು ಆರೆಸ್ಸೆಸ್ ನೂತನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅಭಿಪ್ರಾಯಪಟ್ಟಿದ್ದಾರೆ.
ಆರೆಸ್ಸೆಸ್ ನಲ್ಲಿ ಹೊಸ ಜವಬ್ದಾರಿ ವಹಿಸಿಕೊಂಡ ಬಳಿಕ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು, ಅಸ್ಪೃಶ್ಯತೆ ನಿವಾರಣೆ ನಿಟ್ಟಿನಲ್ಲಿ ಉಡುಪಿಯ ಪೇಜಾವರ ಮಠದದ ಶ್ರೀಗಳಾಗಿದ್ದ ವಿಶ್ವೇಶತೀರ್ಥರಿಂದ ನಾವೆಲ್ಲರೂ ಪ್ರೇರಣೆ ಪಡೆದಿದ್ದೇವೆ.ಈ ನಿಟ್ಟಿನಲ್ಲಿ ಅವರು ಹಲವು ಕಾರ್ಯಕ್ರಮಗಳನ್ನು ನಡೆಸಿದ್ದರು ಮತ್ತು ಸಮಾಜದಲ್ಲಿ ಈ ಬಗ್ಗೆ ಬಹಳ ದೊಡ್ಡ ಜಾಗೃತಿ ಮೂಡಿಸಿದ್ದಾರೆ. ಸಂಘವೂ ಅಸ್ಪೃಶ್ಯತೆ ನಿವಾರಣೆಗಾಗಿ ಹಿಂದಿನಿಂಲೂ ಕಾರ್ಯನಿರ್ವಹಿಸುತ್ತಾ ಬಂದಿದೆ ಎಂದು ಹೇಳಿದರು
ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಕ್ಕೆ ಆರೆಸ್ಸೆಸ್ ಭಾಗಿಯಾಗಿದೆ. ಎಲ್ಲ ಸಮಾಜದವರು ನಿಧಿ ಸಮರ್ಪಣೆ ಮಾಡಿದ್ದಾರೆ. ನಿಧಿ ಸಮರ್ಪಣೆ ಸಂದರ್ಭದಲ್ಲಿ ರಾಜಕೀಯ ಕಾರಣಕ್ಕಾಗಿ ಕೆಲವರು ಇದನ್ನು ವಿರೋಧಿಸಬಹುದ್ ಆದರೆ ದೇಣಿಗೆಯನ್ನು ಎಲ್ಲಾ ಸಮಾಜದವರು ನೀಡಿದ್ದಾರೆ . ಇದಕ್ಕೆ ಕೈ ಜೋಡಿಸಿದ ಎಲ್ಲರಿಗೂ ಅಭಿನಂದನೆ ಎಂದು ತಿಳಿಸಿದರು
ಅಲ್ಲದೆ ಆರೆಸ್ಸೆಸ್ ಧಾರ್ಮಿಕ ಸಂಘಟನೆ ಯಲ್ಲ. ರಾಷ್ಟ್ರೀಯವಾದಿ ಸಂಘಟನೆ. ಹೀಗಾಗಿ, ಯುವಕರು ಹೆಚ್ಚಾಗಿ ಆರೆಸ್ಸೆಸ್ ಮತ್ತು ಅದರ ಸಾಮಾಜಿಕ ಕಾರ್ಯಗಳಿಗೆ ಆಕರ್ಷಿತ ರಾಗಿ ರಾಷ್ಟ್ರ ನಿರ್ಮಾಣ ಕಾರ್ಯಗಳಲ್ಲಿ ಕೈಜೋಡಿಸುತ್ತಿದ್ದಾರೆ’ ಎಂದರು.