ಮುಂಬೈ, ಮಾ.20 (DaijiworldNews/MB) : ಮಾಸ್ಕ್ ಧರಿಸಲು ಹೇಳಿದ್ದಕ್ಕೆ ಯುವತಿಯೋರ್ವಳು ಕೋಪಗೊಂಡು ಪಾಲಿಕೆಯ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ಮುಂಬೈನ ಕಂಡಿವಲಿ ರೋಡ್ನಲ್ಲಿ ನಡೆದಿದೆ.
ಮುಂಬೈ ಮಹಾನಗರ ಪಾಲಿಕೆ ಮಹಿಳಾ ಸಿಬ್ಬಂದಿ ಆಟೋ ರಿಕ್ಷಾದಲ್ಲಿ ಆಗಮಿಸಿದ ಯುವತಿಗೆ ಮಾಸ್ಕ್ ಧರಿಸುವಂತೆ ಸೂಚಿಸಿದ್ದು ಮಾಸ್ಕ್ ಹಾಕದೆ ಇಲ್ಲಿಂದ ತೆರಳಲು ಬಿಡಲ್ಲ ಎಂದು ಹೇಳಿದ್ದಾರೆ. ಇದರಿಂದ ತೀವ್ರ ಆಕ್ರೋಶಕ್ಕೆ ಒಳಗಾದ ಯುವತಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾಳೆ. ಮಹಿಳಾ ಸಿಬ್ಬಂದಿಯ ಕೂದಲನ್ನು ಹಿಡಿದು ಎಳೆದಾಡಿ, ನನ್ನನ್ನು ತಡೆಯಲು, ನನ್ನನ್ನು ಮುಟ್ಟಲು ಎಷ್ಟು ಧೈರ್ಯ ನಿನಗೆ? ಎಂದು ಹೇಳಿ ಮನಬಂದಂತೆ ಥಳಿಸಿದ್ದಾಳೆ ಎಂದು ವರದಿಯಾಗಿದೆ.
ಹಾಗೆಯೇ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆ ವಿರುದ್ದ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.