ಬೆಂಗಳೂರು, ಮಾ.19 (DaijiworldNews/PY): "ಕೊರೊನಾ ವಿರುದ್ದದ ಸಮರದಲ್ಲಿ ಕೈಜೋಡಿಸಿ" ಎಂದು ರಾಜ್ಯದ ಜನತೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕೋವಿಡ್ ಲಸಿಕೆ ಸಂಪೂರ್ಣ ಸುರಕ್ಷಿತ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೋವಿಡ್ ಲಸಿಕೆ ಪಡೆದುಕೊಳ್ಳಿ, ಇದು ನಿಮ್ಮ, ನಿಮ್ಮ ಕುಟುಂಬದ ಮತ್ತು ಸಮಾಜದ ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಕೊರೋನಾ ವಿರುದ್ಧದ ಈ ಸಮರದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಿ" ಎಂದಿದ್ದಾರೆ.
"ನಾನು ಕೂಡಾ ಕೋವಿಡ್ ಲಸಿಕೆ ಪಡೆದುಕೊಂಡಿದ್ದೇನೆ. ನಿಯಮಗಳನ್ವಯ ಎಲ್ಲಾ ಅರ್ಹರೂ ಕೋವಿಡ್ ಲಸಿಕೆ ಪಡೆದುಕೊಳ್ಳಿ ಎಂದು ಮನವಿ ಮಾಡುತ್ತೇನೆ. ಇದು ಸಂಪೂರ್ಣ ಸುರಕ್ಷಿತ ಹಾಗೂ ಕೊರೊನಾ ಮಣಿಸಲು ಅಗತ್ಯ. ಇದರ ಜೊತೆಗೆ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, ನೈರ್ಮಲ್ಯ ಪಾಲಿಸುವುದನ್ನು ತಪ್ಪದೇ ಪಾಲಿಸಿ, ಸರ್ಕಾರದೊಂದಿಗೆ ಸಹಕರಿಸಿ" ಎಂದು ಮನವಿ ಮಾಡಿದ್ದಾರೆ.
ಸದ್ಯಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಲಾಕ್ಡೌನ್ ಮಾಡುವ ಸ್ಥಿತಿಯಿಲ್ಲ ಎಂದಿದೆ. ಮತ್ತೊಂದೆಡೆ ದೇಶದಾದ್ಯಂತ ಕೊರೊನಾ ಲಸಿಕೆ ಅಭಿಯಾನ ಯಶಸ್ವಿಯಾಗುತ್ತಿದೆ.