ಬೆಂಗಳೂರು, ಮಾ.19 (DaijiworldNews/PY): ಮಾಜಿ ಸಚಿವ ಹೆಚ್.ಟಿ.ಕೃಷ್ಣಪ್ಪ (92) ಅವರು ಬೆಂಗಳೂರಿನ ಬಸವೇಶ್ವರ ನಗರದ ಅವರ ಸ್ವಗೃಹದಲ್ಲಿ ಗುರುವಾರ ತಡರಾತ್ರಿ ನಿಧನರಾದರು.
ಕೃಷ್ಣಪ್ಪ ಅವರು ಈ ಹಿಂದೆ ನಾಗಮಂಗಲ ವಿಧಾನಸಭೆ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದು, ಅವರು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಕೃಷ್ಣಪ್ಪ ಅವರು ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರ ಅನುಯಾಯಿಯಾಗಿದ್ದರು.