ಬರಾಬಂಕಿ, ಮಾ.18 (DaijiworldNews/MB) : ತಂದೆ ಚುನಾವಣೆಗೆ ಸ್ಫರ್ಧಿಸುವುದ್ದಕ್ಕೆ ವಿರೋಧ ವ್ಯಕ್ತಪಡಿಸಿ ಚುನಾವಣೆಗೆ ಸ್ಪರ್ಧಿಸುವುದನ್ನು ತಡೆಯಬೇಕೆಂದು 16 ವರ್ಷದ ಪುತ್ರಿಯ ಮೇಲೆ ನಾಲ್ವರು ದುರುಳರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಉತ್ತರಪ್ರದೇಶದ ಬರಾಬಂಕಿ ಎಂಬಲ್ಲಿ ನಡೆದಿದೆ.
16 ವರ್ಷದ ಬಾಲಕಿಯ ತಂದೆಯು ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು ಅದನ್ನು ತಡೆಯುವ ಉದ್ದೇಶದಿಂದ ಶಾಲೆಯಿಂದ ವಾಪಾಸ್ ಬರುತ್ತಿದ್ದ ಬಾಲಕಿಯನ್ನು ತಡೆದು ಆಕೆಯನ್ನು ಅಪಹರಿಸಿ ನಾಲ್ವರು ಆರೋಪಿಗಳು ಆತ್ಮಹತ್ಯೆ ನಡೆಸಿದ್ದಾ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಸಂತ್ರಸ್ತೆಯ ತಂದೆ ದೂರು ನೀಡಿದ್ದು, ''ಬಾಲಕಿಯನ್ನು ಸದ್ಯ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ'' ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಮನೋಜ್ ಪಾಂಡೆ ತಿಳಿಸಿದ್ದಾರೆ.
''ನಾನು ಇದರಿಂದಾಗಿ ತೀವ್ರ ಒತ್ತಡಕ್ಕೆ ಒಳಗಾಗಿದ್ದೇನೆ. ಚುನಾವಣೆಗೆ ನಾನು ಸ್ಪರ್ಧಿಸಬಾರದೆಂದು ನನ್ನ ಮೇಲೆ ಒತ್ತಡ ಹಾಕಲಾಗುತ್ತಿದೆ. ಹಣದ ಆಮಿಷವನ್ನು ಕೂಡಾ ಒಡ್ಡಿದ್ದರು. ನಾನು ಹಣದ ಆಮಿಷಕ್ಕೆ ಒಳಗಾಗಿಲ್ಲ. ಈ ಕಾರಣದಿಂದಾಗಿ ಆಕಾಶ್ ವರ್ಮಾ, ಲಾಲ್ಜಿ ವರ್ಮಾ, ಸಚಿನ್ ವರ್ಮಾ ಮತ್ತು ಶಿವಂ ವರ್ಮಾ ಎಂಬ ನಾಲ್ವರು ಆರೋಪಿಗಳು ನನ್ನ ಮಗಳನ್ನು ಅಪಹರಣ ಮಾಡಿ ಅತ್ಯಾಚಾರವೆಸಗಿದ್ದಾರೆ'' ಎಂದು ಬಾಲಕಿಯ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.