ಬೆಂಗಳೂರು, ಮಾ.18 (DaijiworldNews/HR): ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆಯ ಮುನ್ಸೂಚನೆಯ ಹಿನ್ನಲೆಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಸಿಬ್ಬಂದಿಗಳಿಗೆ 50 ದಿನ ಯಾವುದೇ ಸಿಬ್ಬಂದಿಗಳಿಗೂ ರಜೆಯನ್ನು ನೀಡುವುದಿಲ್ಲ" ಎಂಬುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, "ಆರೋಗ್ಯ ಇಲಾಖೆ ಸಿಬ್ಬಂದಿಗೆ ರಜೆ ರದ್ದು ಪಡಿಸಲಾಗಿದ್ದು, 50 ದಿನ ಯಾವ ಸಿಬ್ಬಂದಿಗೂ ರಜೆ ಇಲ್ಲ. ಕೊರೊನಾ ಎದುರಿಸಲು ಸಿಬ್ಬಂದಿ ರಜೆ ರದ್ದು ಪಡಿಸಲಾಗಿದ್ದು, ನಾನೂ ಸೇರಿದಂತೆ ಯಾರಿಗೂ ರಜೆ ಇಲ್ಲ" ಎಂದರು.
ಇನ್ನು ಕೇವಲ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಅಷ್ಟೇ ರಜೆಯನ್ನು ರದ್ದು ಮಾಡುತ್ತಿಲ್ಲ. ಅವರ ಜೊತೆಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಸಿಬ್ಬಂದಿಗಳ ರಜೆ ಕೂಡ ರದ್ದು ಪಡಿಸಲಾಗುತ್ತಿದೆ" ಎಂದಿದ್ದಾರೆ.
"ಕೊರೊನಾ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸಾವಿರ ಹಾಸಿಗೆ ಮೀಸಲಿಡಲಾಗುವುದು, ವ್ಯಾಕ್ಸಿನ್ ಕೊಡುವ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. 60 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಲು ಸ್ವಯಂ ಪ್ರೇರಿತರಾಗಿ ಬರಬೇಕು" ಎಂದು ತಿಳಿಸಿದ್ದಾರೆ.