ಬೆಂಗಳೂರು, ಮಾ.18 (DaijiworldNews/HR): ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಭವಿತ್ ಈ ಕೇಸಲ್ಲಿ ತನ್ನ ಪಾತ್ರವಿಲ್ಲ ಎಂದು ವಿಡಿಯೋವೊಂದು ಮಾಡಿದ ಬೆನ್ನಲ್ಲೇ ಕಿಂಗ್ ಪಿನ್ ನರೇಶ್ ಕೂಡ ವೀಡಿಯೋ ರಿಲೀಸ್ ಮಾಡಿದ್ದಾರೆ ಎನ್ನಲಾಗಿದೆ.
ಈ ಕುರಿತಂತೆ ವಿಡಿಯೋದಲ್ಲಿ ಮಾತನಾಡಿದ ನರೇಶ್, "ನನ್ನನ್ನು ಸಿಡಿ ಪ್ರಕರಣದ ಸಂತ್ರಸ್ತೆ ಸಂಪರ್ಕ ಹೊಂದಿರುವುದು ನಿಜ, ಆದರೆ ಸಿಡಿ ಪ್ರಕರಣದಲ್ಲಿ ತನ್ನ ಪಾತ್ರವಿಲ್ಲ. ತಾನು ಯಾವುದೇ ಹಣ ಕೂಡ ಪಡೆದಿಲ್ಲ. ಪ್ರಕರಣದಲ್ಲಿ ತನ್ನನ್ನು ಸಿಲುಕಿಸುವಂತ ಹುನ್ನಾರ ನಡೆದಿದೆ" ಎಂದು ತಿಳಿಸಿದ್ದಾರೆ.
"ನಾನು ಹಣ ಪಡೆದಿರುವ ಬಗ್ಗೆ ಸಾಕ್ಷಿ ಕೊಡಿ. ಸಿಡಿ ಕೇಸ್ ನಲ್ಲಿ ನನ್ನನ್ನು ಸಿಲುಕಿಸುವ ಹುನ್ನಾರ ನಡೆದಿದೆ. ತಾನು ತನಿಖೆಗೆ ಬಂದ್ರೆ ಏನಾಗುತ್ತೆಂದು ಗೊತ್ತು. ಹಾಗಾಗಿ ನಾನು ತನಿಖೆಗೆ ಹಾಜರಾಗಿಲ್ಲ. ಸಿಡಿ ಕೇಸ್ ಗೂ ನನಗೂ ಸಂಬಂಧವಿಲ್ಲ" ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ಇನ್ನು ಸಂತ್ರಸ್ತ ಯುವತಿಯೊಂದಿಗೆ ಸಂಪರ್ಕ ಇದ್ದಿದ್ದು ಸತ್ಯ. ನಾನು ಪತ್ರಕರ್ತನಾಗಿದ್ದರಿಂದಾಗ, ಸ್ನೇಹಿತರಿಂದ ನಂಬರ್ ಪಡೆದು ನನ್ನ ಸಂಪರ್ಕಿಸಿದ್ದು ನಿಜ. ಆದ್ರೇ ಆ ವೇಳೆಯಲ್ಲೇ ತನ್ನ ತಾಯಿಗೆ ಹುಷಾರ್ ಇರಲಿಲ್ಲ. ಹೀಗಾಗಿ ನಾನು ಸರಿಯಾಗಿ ಮಾತನಾಡಿರಲಿಲ್ಲ. ಬಳಿಕ ಒಮ್ಮೆ ಕರೆ ಮಾಡಿ ನಮಗೆ ನ್ಯಾಯ ಕೊಡಿಸೋದಿಲ್ವ ಎಂದು ಕೇಳಿದ್ರು. ಆಗ ನನ್ನ ತಾಯಿಗೆ ಹುಷಾರ್ ಇಲ್ಲದ್ದು, ಮಗಳ ನಾಮಕರಣದ ಬ್ಯುಸಿ ಬಗ್ಗೆ ತಿಳಿಸಿದೆ. ಯಾಕ್ ಸಾರ್ ನಮ್ಮನ್ನು ಕರೆಯೋದಿಲ್ವಾ ನಾಮಕರಣಕ್ಕೆ ಅಂದ್ರು. ಬಾರಮ್ಮ ಅಂದೆ ಹೀಗಾಗಿ ನಾಮಕರಣಕ್ಕೂ ಬಂದಿದ್ರು ಎಂದು ಹೇಳಿದ್ದಾರೆ.